ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಿರ್ಮಾಣ ಹಂತದ ಅಪಾರ್ಟ್‌ಮೆಂಡ್‌ನಲ್ಲಿ ಕಾರ್ಮಿಕರು ತಂಗಿದ್ದ ಶೆಡ್ ಕುಸಿದು ನಾಲ್ವರ ದುರ್ಮರಣ

ಬೆಂಗಳೂರು: ಹೊಸಕೋಟೆ ತಾಲೂಕಿನ ತಿರುಮಶೆಟ್ಟಿಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿ ಸೌಖ್ಯ ಕೈಗಾರಿಕಾ ಪ್ರದೇಶದಲ್ಲಿ ಕೂಲಿ ಕಾರ್ಮಿಕರು ತಂಗಲು ನಿರ್ಮಿಸಿದ್ದ ಶೆಡ್ ಮೇಲೆ‌ ತಡೆಗೋಡೆ ಕುಸಿದು ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ.

ಬಿಹಾರ ಮೂಲದ ಮನೋಜ್ ಕುಮಾರ್ (35), ರಾಮ್ ಕುಮಾರ್ (25), ನಿತೀಶ್ ಕುಮಾರ್( 22) ಮೃತ ದುರ್ದೈವಿಗಳು. ಮೃತರ ಪೈಕಿ ಮತ್ತೊಬ್ಬರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.ಇನ್ನು ಘಟನೆಯಲ್ಲಿ ಸುನಿಲ್ ಮಂಡಲ್ (29), ಶಂಭು ಮಂಡಲ (28), ದಿಲೀಪ್ (24) ಹಾಗೂ ದುರ್ಗೇಶ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ವೈಟ್ ಫೀಲ್ಡ್‌ನ ವೈದೇಹಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸೌಪರ್ಣಿಕಾ ಅಪಾರ್ಟ್ಮೆಂಟ್ ಬಳಿ ಕೂಲಿ ಕಾರ್ಮಿಕರು ತಂಗಲು ತಾತ್ಕಾಲಿಕ ಶೆಡ್ ನಿರ್ಮಿಸಲಾಗಿತ್ತು. ಕಳೆದ ವಾರದಿಂದ ಸುರಿಯುತ್ತಿದ್ದ

ಮಳೆಗೆ ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಶೆಡ್ ಮೇಲೆ ಪಕ್ಕದ ತಡೆಗೋಡೆ ಕುಸಿದು ಕಾರ್ಮಿಕರು ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳಕ್ಕೆ ಹೊಸಕೋಟೆ ಡಿವೈಎಸ್ಪಿ ಉಮಾಶಂಕರ್ ಹಾಗೂ ತಿರುಮಲಶೆಟ್ಟಿಹಳ್ಳಿ ಪೊಲೀಸರ ತಂಡ ಭೇಟಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹಗಳನ್ನು ವೈದೇಹಿ ಆಸ್ಪತ್ರೆಗೆ ರವಾನಿಸಲಾಗಿದೆ.

-ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಹೊಸಕೋಟೆ..

Edited By : Shivu K
PublicNext

PublicNext

21/07/2022 10:25 am

Cinque Terre

35.36 K

Cinque Terre

0

ಸಂಬಂಧಿತ ಸುದ್ದಿ