ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿರುಗಾಳಿ,ಮಳೆಗೆ ಬಿದ್ದ ಆಲದ ಮರ-ಅಂಗಡಿ ಧ್ವಂಸ-ಮಾಲೀಕ ಬಚಾವ್ !

ದೊಡ್ಡಬಳ್ಳಾಪುರ: ನಿನ್ನೆ ರಾತ್ರಿ ಸುರಿದ ಬಿರುಗಾಳಿ ಮಳೆಗೆ ಬೃಹತ್ ಆಲದ ಮರ ಅಂಗಡಿ ಮೇಲೆ ಬಿದ್ದಿದ್ದು, ಅಂಗಡಿ ಸಂಫೂರ್ಣ ಹಾನಿ ಆಗಿದೆ. ಅದೃಷ್ಟವಶಾತ್ ಅಂಗಡಿ ಮಾಲೀಕ ಬಚಾವ್ ಆಗಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ಜಿಂಕೆಬಚ್ಚಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ನಿನ್ನೆ ರಾತ್ರಿ ಬಿರುಗಾಳಿ ಸಹಿತ ಮಳೆಯಾಗಿದ್ದು, ಇದರ ಹೊಡೆತಕ್ಕೆ ರಸ್ತೆ ಬದಿಯ ಬೃಹತ್ ಮರ ಆನಂದ್ ಗೌಡರವರಿಗೆ ಸೇರಿದ ಅಂಗಡಿ ಮೇಲೆ ಬಿದ್ದಿದೆ.

ರಾತ್ರಿ 10 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ.

ಈ ವೇಳೆ ಆನಂದ್ ಗೌಡ ಅಂಗಡಿಗೆ ಬಾಗಿಲು ಹಾಕಿ ಮನೆಗೆ ಬಂದಿದ್ರು, ಒಂದು ವೇಳೆ ಅವರು ಅಂಗಡಿಯಲ್ಲಿ ಇದಿದ್ದರೇ ಪ್ರಾಣಾಪಾಯವಾಗುವ ಸಾಧ್ಯತೆ ಇತ್ತು. ಆಲದ ಮರ ಬಿದ್ದ ಪರಿಣಾಮ ರಸ್ತೆ ಬದಿಯ ವಿದ್ಯುತ್ ಕಂಬಗಳು ಸಹ ಮುರಿದು ಬಿದ್ದಿವೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Edited By :
Kshetra Samachara

Kshetra Samachara

06/06/2022 09:03 am

Cinque Terre

2.66 K

Cinque Terre

0

ಸಂಬಂಧಿತ ಸುದ್ದಿ