ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಾಜ್ಯಕ್ಕೆ ವರ್ಲ್ಡ್ ಚಾಂಪಿಯನ್ ಪಟ್ಟ ತರಲು ಕನಸು ಹೊತ್ತ ದೇಹದಾರ್ಢ್ಯ ಸ್ಪರ್ಧಿಗಳು

ವರದಿ- ಬಲರಾಮ್ ವಿ

ಬೆಂಗಳೂರು: 75ನೇ ಸ್ವಾತಂತ್ರ್ಯ ಮಹೋತ್ಸವ ಅಂಗವಾಗಿ ಇಂಡಿಯನ್ ಫಿಟ್ನೆಸ್ ಮತ್ತು ಬಾಡಿ ಬಿಲ್ಡಿಂಗ್ ಫೆಡರೆಷನ್ ಹಾಗೂ ಉತ್ತಮ ಕರ್ನಾಟಕ ಬಾಡಿ ಬಿಲ್ಡರ್ಸ್ ಮತ್ತು ಫಿಟ್ನೆಸ್ ‌ಅಸೋಸಿಯೇಷನ್‌ನಿಂದ ನಗರದ ಟೌನ್ ಹಾಲ್‌ನಲ್ಲಿ 70ನೇ ರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗದ ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು. ಬಳಿಕ ಮಾತನಾಡಿದ ಉತ್ತಮ ಕರ್ನಾಟಕ ಬಾಡಿ ಬಿಲ್ಡರ್ಸ್ ಮತ್ತು ಫಿಟ್ನೆಸ್ ‌ಅಸೋಸಿಯೇಷನ್ ಅಧ್ಯಕ್ಷ ರಾಮಗೊಂಡನಹಳ್ಳಿ ಶ್ರೀನಿವಾಸ್ ಅವರು, ಮುಂದಿನ ವರ್ಷದಲ್ಲಿ ವರ್ಲ್ಡ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ರಾಜ್ಯದಿಂದ ಭಾಗವಹಿಸಿ ರಾಜ್ಯಕ್ಕೆ ಚಾಂಪಿಯನ್ ಪಟ್ಟ ತರಲು ಸಿದ್ಧರಾಗಿರುವುದಾಗಿ ತಿಳಿಸಿದರು..

ಮಹದೇವಪುರ ಕ್ಷೇತ್ರದ ಶಾಸಕರ ಸಹಕಾರದಿಂದ ಹೆಚ್ಚಿನ ಸ್ಪರ್ಧೆಗಳು ಏರ್ಪಡಿಸಲಾಗುತ್ತಿದೆ ಎಂದರು. ಇನ್ನು ಸ್ಪರ್ಧೆಯಲ್ಲಿ ಮಹಿಳಾ ಬಾಡಿ ಬಿಲ್ಡರ್ ಗಳು ಎಲ್ಲರ ಗಮನ ಸೆಳೆದರು. ಈ ವೇಳೆ ಸಂಘಟಕರಾದ ನಾಯ್ಡು, ಸಂಜಯ್ ಶರ್ಮ, ಕಾಮೇಶ್, ಮನೋಜ್, ಹರೀಶ್ ಮತ್ತಿತರರು ಉಪಸ್ಥಿತರಿದ್ದರು.

Edited By : Somashekar
Kshetra Samachara

Kshetra Samachara

16/09/2022 04:59 pm

Cinque Terre

3.47 K

Cinque Terre

0

ಸಂಬಂಧಿತ ಸುದ್ದಿ