ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಗಣೇಶೋತ್ಸವ ವೇಳೆ ಕಾನೂನು ಉಲ್ಲಂಘಿಸಿದ್ರೆ ಕಠಿಣಕ್ರಮ: ಎಎಸ್‌ಪಿ ಪುರುಷೋತ್ತಮ್

ಹೊಸಕೋಟೆ: ಗಣೇಶ ಹಬ್ಬ ಸಮೀಪಿಸುತ್ತಿರುವ ವೇಳೆ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಪೊಲೀಸರು ಜನರ ಜೊತೆ ಸೇರಿ ಜನಸಂಪರ್ಕ ಸಭೆ ಏರ್ಪಡಿಸಿ ಗಣೇಶೋತ್ಸವ ಸುಸೂತ್ರವಾಗಿ ನಡೆಯಲು‌ ಜನರ ಬೆಂಬಲ ಬೇಕೆಂದಿದ್ದಾರೆ. ಜನರ ಸಮಸ್ಯೆಗಳಿಗೆ ಪೊಲೀಸರು ಸ್ಪಂದಿಸಬೇಕು. ಕ್ರಿಯಶೀಲರಾಗಿ ಕೆಲಸ ಮಾಡಬೇಕು. ಜನರ ಸಹಕಾರದಿಂದ ಮಾತ್ರ ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯ ಎಂದು ಬೆಂಗಳೂರು ಗ್ರಾಮಾಂತರ ಅಡಷಿನಲ್ ಎಸ್.ಪಿ. ಪುರುಷೋತ್ತಮ್ ಜನಸಂಪರ್ಕ ಸಭೆಯಲ್ಲಿ ತಿಳಿಸಿದರು..

ಸೂಲಿಬೆಲೆ ವಿವೇಕಾನಂದ ಪ್ರೌಢಶಾಲೆಲಿ ಸೂಲಿಬೆಲೆ ಪೊಲೀಸ್ ಠಾಣೆ ವತಿಯಿಂದ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಲಿ ಮಾತನಾಡಿ ಗಣೇಶೋತ್ಸವ ಮತ್ತು ಪೊಲೀಸ್ ಸೇವೆ ವೇಳೆ ಜನರ ಸಹಕಾರ ಬೇಕು. ಜನರ ಕಾನೂನು ಉಲ್ಲಂಘನೆ ಕಂಡು ಬಂದರೆ ಮುಲಾಜಿಲ್ಲದೆ ಕ್ರಮ ಜರುಗಿಸುತ್ತೇವೆ ಎಂದರು. ಪೊಲೀಸರ ಸಭೆಯಲ್ಲಿ ಸೂಲಿಬೆಲೆ ಹೋಬಳಿಯಿಂದ ಹೆಚ್ಚಿನ ಜನ‌ ಭಾಗವಹಿಸಿ ಜನಸಂಪರ್ಕ ಸಭೆಯನ್ನು ಯಶಸ್ವಿಗೊಳಿಸಿದರು.

ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಹೊಸಕೋಟೆ.

Edited By : Manjunath H D
Kshetra Samachara

Kshetra Samachara

28/08/2022 09:03 am

Cinque Terre

3.83 K

Cinque Terre

0

ಸಂಬಂಧಿತ ಸುದ್ದಿ