ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಪೊಲೀಸರು ಇಂದು ಗೌರಿಗಣೇಶ ಹಬ್ಬದ ಹಿನ್ನಲೆ ಪೊಲೀಸರು & ಜನರ ನಡುವೆ ಸಲಹಾಸೂಚನೆ ಶಾಂತಿ ಸಭೆ ಏರ್ಪಡಿಸಿದ್ದರು. ಗಣೇಶ ಹಬ್ಬಕ್ಕೆ ಪೊಲೀಸರ ಅನುಮತಿ, ಮೆರವಣಿಗೆ, ಬಂದೋಬಸ್ತ್, ಬೆಸ್ಕಾಂ, ಪಿಡಬ್ಲ್ಯೂಡಿ, ಅಗ್ನಿಶಾಮಕ ಇಲಾಖೆಗಳ ಅನುಮತಿ, ಪೊಲೀಸರು ಮತ್ತು ಜನತೆ ನಡುವೆ ಶಾಂತಿ ವ್ಯವಸ್ಥೆಯ ಸಭೆ ನಡೆಯಿತು.
ಹೊಸಕೋಟೆ ನಗರದ ಕಲ್ಯಾಣ ಮಂಟಪದ ಸಭೆಗೆ ಪೊಲೀಸರ ವತಿಯಿಂದ ಬೆಂಗಳೂರು ಗ್ರಾಮಾಂತರ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ, ಎ.ಎಸ್‌ಪಿ ಪುರುಷೋತ್ತಮ್, ಹೊಸಕೋಟೆ ಡಿವೈಎಸ್‌ಪಿ ಉಮಾಶಂಕರ್, ಹೊಸಕೋಟೆ ಇನ್ಸ್ಪೆಕ್ಟರ್ ಮಂಜುನಾಥ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಭಾಗವಹಿಸಿ ಜನತೆಗೆ ಸೂಕ್ತ ಮಾರ್ಗದರ್ಶನ ನೀಡಿದರು. ಜನರೂ ಸಹ ಉತ್ತಮ ಸಲಹೆ ನೀಡಿ ಶಾಂತಿಸಭೆನ ಯಶಸ್ವಿಗೊಳಿಸಿದರು.
ಇನ್ನು ಶಾಂತಿಸಭೆಯಲ್ಲಿ ಹೊಸಕೋಟೆ ನಗರಸಭೆ ಅಧ್ಯಕ್ಷರು, ಸಿಬ್ಬಂದಿ, ಬೆಸ್ಕಾಂ, ಪಿಡಬ್ಲ್ಯೂಡಿ ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಹೊಸಕೋಟೆ ತಾಲೂಕಿನ ಹತ್ತಾರು ಗ್ರಾಮಗಳ ಮುಖಂಡರು, ನಗರದ 30ಕ್ಕೂ ಹೆಚ್ಚು ವಾರ್ಡ್‌ಗಳ ಜನತೆ ಸಭೆಯಲ್ಲಿ ಭಾಗವಹಿಸಿದ್ದರು.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಹೊಸಕೋಟೆ.
PublicNext
24/08/2022 09:50 pm