ಬೆಂಗಳೂರು: ಅಮೃತ ಸ್ವಾತಂತ್ರ್ಯೋತ್ಸವಕ್ಕೆ ಆಚರಣೆಗೆ ದೇಶದ ಜನ ತುದಿಗಾಲಲ್ಲಿ ನಿಂತಿದ್ದಾರೆ. ಬೆಂಗಳೂರಿನಲ್ಲೂ ಈ ಬಾರಿ ಅದ್ದೂರಿ ಸ್ವಾತಂತ್ರ್ಯ ದಿನಕ್ಕೆ ಸರ್ಕಾರ ಸಜ್ಜಾಗಿದೆ. ಈ ಬಾರಿ ಬೆಂಗಳೂರು ಪೊಲೀಸರ ಮೇಲೆ ಸ್ವಾತಂತ್ರ್ಯ ದಿನದ ಸಂಭ್ರಮದ ಜೊತೆಗೆ ಒಂದಷ್ಟು ಒತ್ತಡಕೂಡ ಹೆಚ್ಚಲಿದೆ. ಯಾಕಂದ್ರೆ ಮಾಣಿಕ್ ಷಾ ಮೈದಾನ ಹೊರತುಪಡಿಸಿ ನಗರದ ಬೇರೆ ಕಾರ್ಯಕ್ರಮಗಳಿಗೆ ಪೊಲೀಸರು ಭದ್ರತೆ ಮಾಡಿಕೊಳ್ಳಬೇಕಿದೆ. ಸದ್ಯ ಪೊಲೀಸರು ಎಲ್ಲೆಲ್ಲಿ ಭದ್ರತೆಯನ್ನ ಯಾವ ಮಟ್ಟದಲ್ಲಿ ಮಾಡಿಕೊಂಡಿದ್ದಾರೆ ಅನ್ನೊ ಅಂಕಿ ಅಂಶ ಇಲ್ಲಿ ನೋಡಿ.
ಮಾಣಿಕ್ ಷಾ ಗ್ರೌಂಡ್ ಗೆ ನಿಯೋಜಿಸಿದ ಪೊಲೀಸ್ ಸಿಬ್ಬಂದಿಗಳ ವಿವರ ಹೀಗಿದೆ
ಹೆಚ್ಚುವರಿ ಆಯುಕ್ತರು 1
ಡಿಸಿಪಿಗಳು 10
ಎಸಿಪಿಗಳು 19
ಇನ್ಸ್ಪೆಕ್ಟರ್ 50
ಪಿಎಸ್‌ಐ 100
ಮಹಿಳಾ ಪಿಎಸ್‌ಐ 15
ಎಎಸ್‌ಐ 80
ಕಾನ್‌ಸ್ಟೇಬಲ್ 650
ಗಸ್ತಿನಲ್ಲಿರುವ ಪೊಲೀಸರು 150
ಕೆಎಸ್‌ಆರ್‌ಪಿ 10 ತುಕಡಿ
ಕ್ಯುಆರ್‌ಟಿ 1
ಡಿ ಸ್ವ್ಯಾಟ್ 1
ಆರ್ ಎ ಎಫ್ 1
ಇನ್ನೂ ಇದರ ಜೊತೆಗೆ ಈ ಬಾರಿ ಬೆಂಗಳೂರು ಪೊಲೀಸರಿಗೆ ಈದ್ಗಾ ಮೈದಾನದ ಭದ್ರತೆ ಕೂಡ ಹೆಚ್ಚುವರಿಯಾಗಿದ್ದು, ಮಾಣಿಕ್ ಷಾ ಮೈದಾನಕ್ಕಿಂತ ಹೆಚ್ಚಿನ ನಿಗಾವನ್ನ ಈದ್ಗಾ ಮೈದಾಸ್ ಮೇಲೆ ವಹಿಸಲಾಗಿದೆ.
ಈದ್ಗಾ ಮೈದಾನಕ್ಕೂ ಹೆಚ್ಚಿದ ಪೊಲೀಸ್ ಭದ್ರತೆ : ಸಿಬ್ಬಂದಿಗಳ ವಿವರ
ಹೆಚ್ಚುವರಿ ಆಯುಕ್ತರು 1
ಡಿಸಿಪಿಗಳು 3
ಎಸಿಪಿಗಳು 6
ಇನ್ಸ್ಪೆಕ್ಟರ್ 15
ಪಿಎಸ್‌ಐ 45
ಮಹಿಳಾ ಪಿಎಸ್‌ಐ 05
ಎಎಸ್‌ಐ 30
ಕಾನ್‌ಸ್ಟೇಬಲ್ 300
ಗಸ್ತಿನಲ್ಲಿರುವ ಪೊಲೀಸರು 20
ಕೆಎಸ್‌ಆರ್‌ಪಿ 5 ತುಕಡಿ
ಸಿಎಆರ್ 2 ತುಕಡಿ
ಆರ್‌ಎಎಫ್ 1
ಇಷ್ಟೇ ಅಲ್ಲದೆ ಕಾಂಗ್ರೆಸ್ ಆಜಾದಿ ಯಾತ್ರೆ ಹಮ್ಮಿಕೊಂಡಿದ್ದು, ಆರು ಕಿ.ಮೀ ಯಾತ್ರೆಗೂ ಪೊಲೀಸರು ಭದ್ರತೆ ಮಾಡಿಕೊಂಡಿದ್ದು
ಕಾಂಗ್ರೆಸ್ ಆಜಾದಿ ಯಾತ್ರೆಗೆ ಪೊಲೀಸ್ ಸರ್ಪಗಾವಲು : ನೀಯೋಜನೆಗೊಂಡ ಸಿಬ್ಬಂದಿ ಮಾಹಿತಿ
ಡಿಸಿಪಿಗಳು 4
ಎಸಿಪಿಗಳು 15
ಇನ್ಸ್ಪೆಕ್ಟರ್ 20
ಪಿಎಸ್‌ಐ 24
ಮಹಿಳಾ ಪಿಎಸ್‌ಐ 03
ಎಎಸ್‌ಐ 15
ಕಾನ್‌ಸ್ಟೇಬಲ್ 500
ಕೆಎಸ್‌ಆರ್‌ಪಿ 05 ತುಕಡಿ
ಸಿಎಆರ್ 6ತುಕಡಿ
ಇದರ ಜೊತೆಗೆ ಸಿಲಿಕಾನ್ ಸಿಟಿ ಪೊಲೀಸರು ಬಿಜೆಪಿ ಕಾರ್ಯಕ್ರಮಕ್ಕೆ 300 ಪೊಲೀಸರಿಂದ ಭದ್ರತೆ ಮಾಡಿಕೊಂಡಿದ್ದರೆ ಆಗಸ್ಟ್ 15ರಂದು ಲಾಲ್ ಬಾಗ್ ಫಲಪುಷ್ಪ ಪ್ರದರ್ಶನದ ಕೊನೆ ದಿನವಾಗಿದ್ದು, ಲಾಲ್‌ಬಾಗ್ ಸಾಕಷ್ಟು ಜನ ಬರುವ ನಿರೀಕ್ಷೆಯಿದೆ. ಅಲ್ಲೂ ಪೊಲೀಸ್ರು ಭದ್ರತೆ ಮಾಡಿಕೊಂಡಿದ್ದಾರೆ.
PublicNext
14/08/2022 10:52 am