ಬೆಂ.ಗ್ರಾ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ DHO ತಿಪ್ಪೇಸ್ವಾಮಿ, ಲೈಸೆನ್ಸ್ ಇಲ್ಲದ ಕಾರಣ ಹೊಸಕೋಟೆಯ GMS ಆಸ್ಪತ್ರೆಗೆ ಬೀಗ ಜಡಿದಿದ್ದರು. ಇದರಿಂದ ಗ್ಯಾಂಗ್ರಿನ್ ಚಿಕಿತ್ಸೆ ಕೋರ್ಸ್ ಮುಗಿಯದ ರೋಗಿಗಳು ಪರದಾಡಿದ್ದರು. ಕೂಡಲೇ ಅಧಿಕಾರಿಗಳು ಆಸ್ಪತ್ರೆ ಬೀಗ ತೆರೆಯಬೇಕೆಂದು ರೋಗಿಗಳೇ ಇಂದು ಆಸ್ಪತ್ರೆ ಬಳಿ ಪ್ರತಿಭಟನೆ ನಡೆಸಿದ್ದಾರೆ.
ಲೈಸನ್ಸ್ ಇಲ್ಲದೇ ಹೋಸಕೋಟೆ ನಗರದ ಸೂಲಿಬೆಲೆ ರಸ್ತೆಯ GMS ಹೆಲ್ತ್ ಕೇರ್ ಸೆಂಟರ್ ಮೇಲೆ ಹತ್ತು ದಿನಗಳ ಹಿಂದೆ ದಾಳಿ ನಡೆದಿತ್ತು. ಆಸ್ಪತ್ರೆಗೆ ಬೀಗ ಜಡಿಯಲಾಗಿತ್ತು. ಇದರಿಂದ GMS ಆಸ್ಪತ್ರೆಗೆ ಬರ್ತಿದ್ದ ಗ್ಯಾಂಗ್ರಿನ್ ರೋಗಿಗಳನ್ನ ಬೇರೆಡೆಗೆ ಶಿಫ್ಟ್ ಮಾಡಲಾಗಿತ್ತು. ಆದ್ರೆ ಇಂದು ಗ್ಯಾಂಗ್ರಿನ್ ಚಿಕಿತ್ಸಾ ಕೋರ್ಸ್ ಮುಗಿಯದ ನಲವತ್ತಕ್ಕೂ ಹೆಚ್ಚು ರೋಗಿಗಳು ಬಂದ್ ಮಾಡಿರೋ ಆಸ್ಪತ್ರೆ ತೆರೆಯುವಂತೆ ಒತ್ತಾಯಿಸಿದ್ದಾರೆ.
ಲೈಸೆನ್ಸ್ಗೆಅರ್ಜಿ ಹಾಕಿ 90 ದಿನದೊಳಗೆ ಆರೋಗ್ಯ ಇಲಾಖೆ ನೀಡುತ್ತದೆ. ಆದ್ರೆ ಕಳೆದ ಜುಲೈ 29ರಂದೇ ನೋಟಿಸ್ ನೀಡಿ ಅಂದೇ ದಾಳಿ ಮಾಡಿದ್ದಾರೆ. ಇನ್ನೂ ಆಸ್ಪತ್ರೆ ತೆರೆಯಲು ಡಿಹೆಚ್ಓ ತಿಪ್ಪೇಸ್ವಾಮಿ 30 ಲಕ್ಷ ಡಿಮ್ಯಾಂಡ್ ಮಾಡಿದ್ದರು ಎಂದು ಆಸ್ಪತ್ರೆ ಮಾಲೀಕ ಆರೋಪಿಸಿದ್ದಾರೆ.
ಕೆಪಿಎಂಇ ಪರವಾನಗಿ ಪಡೆಯದ GMS ಆಸ್ಪತ್ರೆಯದ್ದು ತಪ್ಪೇ. ಬೀಗ ಜಡಿದು ಕಾನೂನು ಕ್ರಮ ಜರುಗಿಸಬೇಕಿದ್ದ DHO ಲಂಚಕ್ಕೆ ಬೇಡಿಕೆ ಇಟ್ಟಿದ್ದು ಮತ್ತೊಂದು ತಪ್ಪು. ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತೆ ಅಮಾಯಕ ರೋಗಿಗಳು ಪರದಾಡ್ತಿರೋದು ದುರಂತ.
-ಸುರೇಶ್ ಬಾಬು, ಪಬ್ಲಿಕ್ ನೆಕ್ಸ್ಟ್ ಹೊಸಕೋಟೆ..
Kshetra Samachara
10/08/2022 03:24 pm