ರಿಪೋರ್ಟ್- ರಂಜಿತಾಸುನಿಲ್..
ಬೆಂಗಳೂರು : ಬೆಂಗಳೂರು ದಕ್ಷಣ ಭಾಗದ ಯಶವಂತಪುರ ವಿಧಾನಸಭಾ ಕ್ಷೇತ್ರದ ಕೆಂಗೇರಿ ಹೋಬಳಿಯ ಅಗರ ಗ್ರಾಮ ಪಂಚಾಯತಿಯಲ್ಲಿ ಒತ್ತುವರಿಯಾಗಿದ್ದ ಗೋಮಾಳದ ಭೂಮಿಯಲ್ಲಿದ ತಾತ್ಕಾಲಿಕ ಶೆಡ್ ಗಳನ್ನ ತೆರವೂ ಮಾಡಲಾಗಿದೆ.
ಸರ್ವೆ ನಂ 28 ರ 7 ಎಕರೆ 5 ಗುಂಟೆಯನ್ನ ಅಲೆಮಾರಿ ಜನ 1 ತಿಂಗಳ ಹಿಂದೆ ಒತ್ತುವರಿ ಮಾಡಿ ರಾತ್ರೋರಾತ್ರಿ ಶೆಡ್ ನಿರ್ಮಾಣ ಮಾಡಿಕೊಂಡಿದ್ರು. ಇದಕ್ಕೆ ಗ್ರಾಮಸ್ಥರೂ ಕೂಡ ಆಕ್ರೋಶ ವ್ಯಕ್ತಪಡಿಸಿದ್ರು.
ಈ ಹಿನ್ನಲೆಯಲ್ಲಿ ಹಳ್ಳಿಯವರು ಮತ್ತು ಅಲೆಮಾರಿ ಜನ ಕೋರ್ಟ್ ಮೆಟ್ಟಿಲೇರಿದ್ರು. ಸದ್ಯ ತೀರ್ಮಾನ ಹಳ್ಳಿಯವರ ಕಡೆಯಾಗಿದೆ. ಇದ್ರಿಂದ ಸ್ಥಳಕ್ಕೆ ಭೇಟಿ ನೀಡಿದ BMTF ಹಾಗೂ ಕಗ್ಗಲೀಪುರ ಪೊಲೀಸ್ ಸಿಬ್ಬಂದಿ ಸಹಕಾರದಿಂದ ಸರ್ಕಾರಿ ಜಾಗವನ್ನು ಆಕ್ರಮಿಸಿಕೊಂಡು ಅನಧಿಕೃತವಾಗಿ ನಿರ್ಮಾಣ ಮಾಡಿಕೊಂಡ ಶೆಡ್ ಗಳನ್ನ ತೆರವು ಮಾಡಿದ್ದಾರೆ. ಯಾರೇ ಅತಿಕ್ರಮ ಪ್ರವೇಶ ಮಾಡಿದರೆ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳಿಂದ ನಮ್ಮ ಭೂಮಿ ನಮಗೆ ಸಿಕ್ಕಿತು ಎಂದು ಗ್ರಾಮಸ್ಥರು ನಿಟ್ಟುಸಿರುವ ಬಿಡುತ್ತಿದ್ದಾರೆ.
PublicNext
10/08/2022 11:29 am