ಬೆಂಗಳೂರು: ಮೊಹರಂ ಆಚರಣೆ ಹಿನ್ನೆಲೆಯಲ್ಲಿ ಅಶೋಕ ನಗರ ಸಂಚಾರ ಠಾಣೆಯ ವ್ಯಾಪ್ತಿಯ ವಿವಿಧೆಡೆ ಸಂಚಾರ ವ್ಯವಸ್ಥೆಯಲ್ಲಿ ಇಂದು ಬದಲಾವಣೆ ಮಾಡಲಾಗಿದೆ.
ಮೊಹರಂ ಅಂಗವಾಗಿ ಇಂದು ಮಧ್ಯಾಹ್ನ 1 ಗಂಟೆಯಿಂದ ಸಂಜೆ 4.30ರವರೆಗೆ ಹೊಸೂರು ಮುಖ್ಯ ರಸ್ತೆಯ ಜಾನ್ಸನ್ ಮಾರ್ಕೇಟ್ ಜಂಕ್ಷನ್‌ನಿಂದ ಸಿಎಂಪಿ ಜಂಕ್ಷನ್‌ವರೆಗೆ ಮೆರವಣಿಗೆ ನಡೆಯಲಿದೆ.
ಮೆರವಣಿಗೆಯಲ್ಲಿ ಮೂರು ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದ್ದು, ಹೊಸೂರು ರಸ್ತೆ - ವೆಲ್ಲಾರ್ ಜಂಕ್ಷನ್ ಸಿಎಂಪಿ ಜಂಕ್ಷನ್ ಎರಡು ಬದಿಯ ಮಾರ್ಗ ಬದಲಾವಣೆ ಮಾಡಲಾಗಿದೆ. ಬ್ರಿಗೇಡ್ ರಸ್ತೆಯ ಮೂಲಕ ಹೊಸೂರು ರಸ್ತೆಗೆ ಹೋಗುವ ವಾಹನ ಸವಾರರು ವೆಲ್ಲಾರ್ ರಸ್ತೆಯಲ್ಲಿ ಬಲ ತಿರುವು ಪಡೆದು ಕೊಂಡು ರಿಚ್ಮಂಡ್ ಮಾರ್ಗವಾಗಿ ಮುಂದೆ ಹೋಗಬೇಕು. ಹೀಗೆ ಆ ಭಾಗದ ರಸ್ತೆಗಳಲ್ಲಿ ಇಂದು ಹಲವು ಬದಲಾವಣೆ ಮಾಡಲಾಗಿದೆ.
Kshetra Samachara
09/08/2022 10:51 am