ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಈದ್ಗಾ ಮೈದಾ‌ನ ವಿವಾದ: ದಾಖಲೆ‌ ಸಲ್ಲಿಕೆಗೆ ಕಾಲಾವಕಾಶ ಕೋರಿದ ವಕ್ಫ್ ಬೋರ್ಡ್

ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನ ತಮ್ಮದೇ ಎಂಬುದಕ್ಕೆ ವಕ್ಫ್ ಬೋರ್ಡ್ ಕಾಲಾವಕಾಶವನ್ನು ಕೋರಿದೆ. ಸೂಕ್ತ ದಾಖಲೆ‌ ಸಲ್ಲಿಸಲು ಕೆಲ ದಿನಗಳವರೆಗೆ ಸಮಯಾವಕಾಶ ಬೇಕಿದೆ ಎಂದು ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಾದಿ ಹೇಳಿದ್ದಾರೆ.

ಇಂದು ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿನ ಕೇಂದ್ರ ಕಚೇರಿಯಲ್ಲಿ ಅವರು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಚಾಮರಾಜ ಪೇಟೆ ಈದ್ಗಾ ಮೈದಾನ 1871 ರಿಂದ ನಮ್ಮ ಆಸ್ತಿ. ಸುಪ್ರೀಂ ಕೋರ್ಟ್ ಕೂಡಾ ಆದೇಶಿಸಿದೆ. ಬಿಬಿಎಂಪಿ ಪ್ರತಿವಾದಿ ಆಗಿದ್ದು, ಅವರ ಬಳಿ ಸೂಕ್ತ ದಾಖಲೆ ಇರಬೇಕು. ಆದರೂ ನಮ್ಮ ಬಳಿ ಕೇಳುತ್ತಿದ್ದಾರೆ.

ಕೆಲವೊಂದು ಧೃಡೀಕರಣ ಪತ್ರವನ್ನು ಪಾಲಿಕೆ ಕೇಳಿರುವ ಹಿನ್ನೆಲೆಯಲ್ಲಿ ನಮಗೆ ಅವಕಾಶ ಬೇಕು ಎಂದು ಶಾಫಿ ಸಾದಿ ಹೇಳಿದ್ದಾರೆ. ಸೂಕ್ತ ದಾಖಲೆ ಸಲ್ಲಿಕೆ ಮಾಡುವಂತೆ ಎರಡನೇ ನೋಟಿಸ್ ತಿಂಗಳ ಹಿಂದೆ ವಕ್ಫ್ ಬೋರ್ಡ್ ಗೆ ಬಿಬಿಎಂಪಿ ಅಧಿಕಾರಿಗಳು ನೀಡಿದ್ದರು.

Edited By : Shivu K
PublicNext

PublicNext

22/07/2022 05:03 pm

Cinque Terre

26.92 K

Cinque Terre

0

ಸಂಬಂಧಿತ ಸುದ್ದಿ