ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಪ್ರೀಂ ಕೋರ್ಟ್ ನಲ್ಲಿ ಇಂದು ಬಿಬಿಎಂಪಿ ಚುನಾವಣೆ ವಿಚಾರ ಪ್ರಸ್ತಾಪ

ಬೆಂಗಳೂರು : ಸುಪ್ರೀಂ ಕೋರ್ಟ್ ನಲ್ಲಿ ಇಂದು ಬಿಬಿಎಂಪಿ ಚುನಾವಣೆಯ ವಿಚಾರದ ವಿಚಾರಣೆ ನಡೆಯಲಿದೆ.ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್ ನೀಡಿರುವ 8 ವಾರಗಳ ಗಡವು ಇಂದು ಮುಕ್ತಾಯವಾಗಿದ್ದು,ಈ ಹಿನ್ನೆಲೆ ಇಂದು ಮತ್ತೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ.

ಈ ಹಿಂದೆ ಸುಪ್ರೀಂ ಕೋರ್ಟ್ 8 ವಾರಗಳ ಒಳಗಾಗಿ ವಾರ್ಡ್ ವಿಂಗಡಣೆ, ಮೀಸಲಾತಿ ಘೋಷಣೆ ಮತ್ತು ಚುನಾವಣೆ ನಡೆಸುವಂತೆ ಸೂಚನೆ ನೀಡಿತ್ತು. ಇನ್ನು ಸುಪ್ರೀಂನಲ್ಲಿ ಸರ್ಕಾರವೇ 8 ವಾರಗಳ ಕಾಲಾವಕಾಶವನ್ನು ಕೇಳಿತ್ತು.ಆದರೆ ಇದುವರೆಗೂ ಮೀಸಲಾತಿ ಘೋಷಿಸದ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಮತ್ತೆ ಕಾಲಾವಕಾಶ ಕೇಳುವ ಸಾಧ್ಯತೆ ಇದೆ.ಇನ್ನು ಇಂದು ನಡೆಯುವ ಸುಪ್ರೀಂ ಕೋರ್ಟ್ ನ ಆದೇಶದತ್ತ ಬೆಂಗಳೂರು ನಾಯಕರ ಚಿತ್ತವಲಿದೆ.

Edited By : Nirmala Aralikatti
Kshetra Samachara

Kshetra Samachara

22/07/2022 01:05 pm

Cinque Terre

870

Cinque Terre

0

ಸಂಬಂಧಿತ ಸುದ್ದಿ