ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಕೀಲಸರ ಸಂಘದ ಚುನಾವಣೆಗೆ ಕಾರ್ಯಕಾರಿ ಸದಸ್ಯ ಸ್ಥಾನಕ್ಕೆ ನಾಮಪತ್ರ

ಆನೇಕಲ್: ವಕೀಲಸರ ಸಂಘದ ಚುನಾವಣೆಗೆ ಕಾರ್ಯಕಾರಿ ಸದಸ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿಲಾಯಿತು, ವಕೀಲರ ಸಂಘದ ಚುನಾವಣೆ ಇದೇ ಜುಲೈ 24 ರ ಭಾನುವಾರ ನಡೆಯಲಿದ್ದು ಆಕಾಂಕ್ಷಿಗಳು ನಾಮಿನೇಷನ್ ಸಲ್ಲಿಸುತ್ತಿದ್ದಾರೆ.

ಈಗಾಗಲೇ ಅಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದ್ದು, ಜಿದ್ದಾಜಿದ್ದಿಯಾಗಿ ಚುನಾವಣೆ ಕಣವಾಗಿದೆ, ಈ ದಿನ ಮಂಗಳವಾರ ಕಾರ್ಯಕಾರಿ ಸದಸ್ಯ ಸ್ಥಾನಕ್ಕೆ ಪುರುಷೋತ್ತಮ ಎ ನಾಮಪತ್ರ ಸಲ್ಲಿಸಿದ್ದು, ಹಿರಿಯ ವಕೀಲರು, ಕಿರಿಯ ವಕೀಲರು ಸೇರಿ ನಾಮಪತ್ರದ ಸಲ್ಲಿಸುವಾಗ ಭಾಗವಹಿಸಿದರು.

ಈ ವೇಳೆಯಲ್ಲಿ ನಾಮಪತ್ರ ಸಲ್ಲಿಸಿದ ಪುರುಷೋತ್ತಮ ಎ ವಕೀಲರು ಮಾತನಾಡಿ, ಜನ ನೊಂದು ವಕೀಲರ ಬಳಿ ಬರುತ್ತಾರೆ, ವಕೀಲರು ನ್ಯಾಯಾಯುತವಾಗಿ ನಡೆದುಕೊಳ್ಳಬೇಕು ಮತ್ತು ನ್ಯಾಯಾಲಯವನ್ನು ಪರಿಶುದ್ಧತೆ ನೆಲವನ್ನಾಗಿ ಮಾಡಬೇಕಿದೆ, ಹಿರಿಯ ಕಿರಿಯ ವಕೀಲರು ನನಗೆ ಬೆಂಬಲವನ್ನು ನೀಡಿದ್ದು ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು, ಆನೇಕಲ್ ವಕೀಲರ ಸಂಘದ ಚುನಾವಣೆ ಪಾರದರ್ಶಕವಾಗಿ ನಡೆಯುತ್ತಿದ್ದು ಯಾರೇ ಗೆದ್ದರು ಅಣ್ಣತಮ್ಮರಂತೆ ಇರುತ್ತೇವೆ, ಎಂದು ತಿಳಿಸಿದರು

ನಾಮಪತ್ರ ಸಲ್ಲಿಸುವಾಗ ಹಿರಿಯ ವಕೀಲರಾದ ಆರ್ ವಿ ವಿ ಮೂರ್ತಿ, ಎ.ಜಿ ರಾಜು, ಶ್ರೀಕಂಠಾಚಾರಿ, ಚೂಡಸಂದ್ರ ವೇಣು, ಲಕ್ಮೀಸಂಪತ್, ಮುತ್ತನಲ್ಲೂರು ಮಹೇಶ್, ಸಂಘರ್ಷ, ಶ್ರೀನಿವಾಸ್, ನಾಗರಾಜ್ ತ್ಯಾವಕನಹಳ್ಳಿ ರೂಪ, ಶಶಿಕುಮಾರ್ ಅನುರಾಧಾ ಆರ್, ‌ಸುಜೀಂದ್ರ, ಕಿರಣ್, ರಾಘವೇಂದ್ರ,ಅನಂದ ಚಕ್ರವರ್ತಿ ಇನ್ನೂ ಅನೇಕ ವಕೀಲರು ಭಾಗವಹಿಸಿದರು,

Edited By : PublicNext Desk
Kshetra Samachara

Kshetra Samachara

12/07/2022 06:34 pm

Cinque Terre

1.13 K

Cinque Terre

0

ಸಂಬಂಧಿತ ಸುದ್ದಿ