ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಜನ ಸಾಮಾನ್ಯರು ಸಾಕಷ್ಟು ಸಮಯವನ್ನ ಟ್ರಾಫಿಕ್ ನಲ್ಲೆ ಕಳಿಯುತ್ತಾರೆ. ಈ ಸಮಸ್ಯೆಯನ್ನ ಬಗೆಹರಿಸೋದು ಸ್ವಲ್ಪ ಕಷ್ಟ.
ಮೊನ್ನೆ ಮೋದಿ ಬಂದು ಹೋದ ನಂತರ ಎಲ್ಲಾ ಆಡಳಿತ ವಿಭಾಗ ಆ್ಯಕ್ಟಿವ್ ಆಗಿವೆ. ಹೇಗಾದ್ರೂ ಮಾಡಿ ಟ್ರಾಫಿಕ್ ಕಂಟ್ರೋಲ್ ಮಾಡುವಂತೆ ಮೋದಿ ಸೂಚನೆ ಕೊಟ್ಟಿದ್ದಾರೆ. ಈ ಹಿನ್ನೆಲೆ ನಿನ್ನೆ ರಾತ್ರಿ ಪೊಲೀಸ್ ಕಮಿಷನರ್, ಬಿಬಿಎಂಪಿ ಕಮಿಷನರ್, ಬಿಡಿಎ ಆಯುಕ್ತ, ಸಂಚಾರಿ ಜಂಟಿ ಆಯುಕ್ತ ಸೇರಿ ಹಲವು ಅಧಿಕಾರಿಗಳು ಸಿಟಿ ರೌಂಡ್ಸ್ ಹಾಕಿದ್ದಾರೆ.
ಹೆಬ್ಬಾಳ ಸೇರಿ ಟ್ರಾಫಿಕ್ ದಟ್ಟಣೆಯಾಗೊ ಸ್ಥಳ ಪರಿಶೀಲನೆ ಮಾಡಿ ಹೇಗೆ ಕಂಟ್ರೋಲ್ ಮಾಡ್ಬೋದು ಎನ್ನುವ ವರದಿ ರೆಡಿ ಮಾಡಿಕೊಂಡಿದ್ದಾರೆ. ಇದರ ಜೊತೆ ಪೊಲೀಸ್ ಇಲಾಖೆ ಕೂಡ ಒಂದು ವರದಿ ರೆಡಿ ಮಾಡಿಕೊಂಡಿದ್ದು DG-IGP ಪ್ರವೀಣ್ ಸೂದ್ ಗೆ ನೀಡಿದ್ದಾರೆ.
ಡಿಜಿ ಕಛೆರಿಯಲ್ಲಿ ಇಂದು ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ರೂಲ್ಸ್, ಟೋಯಿಂಗ್,ಭದ್ರತೆ ಸೇರಿ ಹಲವು ವಿಚಾರಗಳ ಚರ್ಚೆ ಮಾಡಲಾಯ್ತು.ಸಭೆ ಬಳಿಕ ಡಿಜಿ ಐಜಿಪಿ ಪ್ರವೀಣ್ ಸೂದ್ ಅಧಿಕಾರಿಗಳಿಗೆ ಹಲವು ಸೂಚನೆ ನೀಡಿದ್ದು, ಡಾಕ್ಯುಮೆಂಟ್ ಗೋಸ್ಕರ ಗಾಡಿ ತಡೆದು ನಿಲ್ಲಿಸೋದು ಬೇಡ.100ರಲ್ಲಿ 10 ಜನರ ಬಳಿ ಡಾಕ್ಯುಮೆಂಟ್ ಇರಲ್ಲ.ಆ 10 ಜನಕ್ಕಾಗಿ 100 ಜನ ಸಮಸ್ಯೆ ಎದುರಿಸೋದು ಬೇಡ.
ಕಣ್ಣೆದುರು ಸಿಗ್ನಲ್ ಜಂಪ್,ರಾಂಗ್ ರೂಟಲ್ಲಿ ಬಂದ್ರೆ ಮುಲಾಜಿಲ್ಲದೆ ಕ್ರಮ ತಗೊಳ್ಳಿ, ಟೋಯಿಂಗ್ ಸದ್ಯಕ್ಕೆ ಜಾರಿ ಮಾಡೋದು ಬೇಡ,ಅದ್ರಲ್ಲಿ ಹಲವು ಲೋಪದೋಷಗಳಿವೆ . ಮುಂದೆ ಆಲೋಚನೆ ಮಾಡಿ ಖಾಸಗಿಯವ್ರಿಗೆ ಕೊಟ್ಟು ಟೋಯಿಂಗ್ ಮಾಡಿಸೋ ಬಗ್ಗೆ ಚಿಂತಿಸೋಣ ಎಂದು ಡಿಜಿ ಐಜಿಪಿ ಸೂಚಿಸಿದ್ದಾರೆಂದು ತಿಳಿದು ಬಂದಿದೆ.
PublicNext
29/06/2022 07:29 pm