ಬೆಂಗಳೂರು: ಟ್ರಾಫಿಕ್ ರೂಲ್ಸ್, ವೈಯಲೇಷನ್ ಫೈನ್ ಗಳು ಕೇವಲ ಜನಸಾಮಾನ್ಯರ ಮೇಲೆ ಮಾತ್ರ ಪೊಲೀಸ್ರು ಹಾಕ್ತಾರೆ ಅನ್ನೋ ಮಾತುಗಳು ಕೇಳಿ ಬರ್ತಿತ್ತು. ಆದ್ರೆ ಸರ್ಕಾರಿ ವಾಹನ ಸಚಿವರ ಕಾರುಗಳ ಮೇಲೂ ಸಂಚಾರ ನಿಯಮ ಉಲ್ಲಂಘನೆ ಕೇಸ್ ಗಳು ದಾಖಲಾಗಿವೆ.
ಸದ್ಯ ಸಚಿವರು ಮತ್ತು ಸರ್ಕಾರಿ ಅಧಿಕಾರಿಗಳು ಬಳಸುವ ವಾಹನಗಳ ಮೇಲೂ ಕೇಸ್ ದಾಖಲಾಗಿದೆ. ಆದ್ರೆ ಈ ಕೇಸ್ ಗಳನ್ನ ಪೊಲೀಸ್ರೆ ಹಾಕಿದ್ರಾ ಇಲ್ಲ ಸಾರ್ವಜನಿಕರು ರೂಲ್ಸ್ ಬ್ರೇಕ್ ಆದ ಸಂದರ್ಭದಲ್ಲಿ ಫೋಟೊ ತೆಗೆದು ವೆಬ್ ಸೈಟ್ ಗೆ ಅಪ್ಲೋಡ್ ಮಾಡಿದ್ರಾ ಎನ್ನುವುದು ಗೊತ್ತಿಲ್ಲ. ಇನ್ನೂ ಸದ್ಯದ ಆಟೋಮೇಟಿಕ್ ನಂಬರ್ ಪ್ಲೇಟ್ ರೆಕಗ್ನೈಸ್ ಸಿಸ್ಟಮ್ ನಲ್ಲೂ ಈ ಫೋಟೊ ರೆಕಾರ್ಡ್ ಆಗಿರೋ ಸಾಧ್ಯತೆಯಿದೆ.
ಇನ್ನೂ ವಾಹನಗಳ ಡಿಟೈಲ್ ನೋಡೋದಾದ್ರೆ. ಸಚಿವರೊಬ್ಬರ ವಾಹನ KA-02-GA 5555 ವಾಹನ ಮೇಲೆ 2000 ಫೈನ್ ಇದ್ದು ಸರ್ಕಾರಿ ವಾಹನ KA-04-GA-1 ಇನ್ನೋವಾ ಕಾರಿನ ಮೇಲೆ ಕೂಡ ಇದೆ 4000 ಸಾವಿರ ಫೈನ್ ಪೊಲೀಸ್ ಡಿಪಾರ್ಟ್ಮೆಂಟ್ ಗೆ ಸೇರಿದ KA-50-GA 0001 ನಂಬರಿನ ಇನ್ನೋವಾ ಕಾರಿನ ಮೇಲಿದೆ 900 ರೂಪಾಯಿ ಫೈನ್ ಇದೆ. ಸದ್ಯ ಸಂಚಾರ ಇಲಾಖೆ ಪೊಲೀಸ್ರು ಈ ವಾಹನಗಳನ್ನ ಬಳಸುವ ಅಧಿಕಾರಿಗಳಿಗೆ ನೋಟೀಸ್ ನೀಡಿ ಕ್ರಮ ಕೈಗೊಳ್ಳುವವರೆ ಅಂತ ಕಾದು ನೋಡಬೇಕಿದೆ.
Kshetra Samachara
18/06/2022 04:20 pm