ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಲೈಸನ್ಸ್ ಪಡೆಯದ 'ಹಿಂದವೀ ಮೀಟ್ ಮಾರ್ಟ್' ಪಾಲಿಕೆಯಿಂದ ನೋಟೀಸ್

ಬೆಂಗಳೂರು: ಪರವಾನಗಿ ಪಡೆಯದೆ ಕಾರ್ಯ ನಿರ್ವಹಿಸುತ್ತಿದ್ದ ನಗರದ ಜಟ್ಕಾ ಕಟ್ 'ಹಿಂದವೀ ಮೀಟ್ ಮಾರ್ಟ್ಸ್' ಮಾಲೀಕರಿಗೆ ತಕ್ಷಣ ಪರವಾನಗಿ ಪಡೆಯುವಂತೆ ಬಿಬಿಎಂಪಿ ಸೂಚಿಸಿ ನೋಟೀಸ್ ಜಾರಿಗೊಳಿಸಿದೆ.

ಪರವಾನಗಿ ಪಡೆಯಲು ಒಂದು ವಾರದ ಗಡುವು ನೀಡಲಾಗಿದ್ದು, ಈ ಅವಧಿಯಲ್ಲಿ ಲೈಸನ್ಸ್ ಪಡೆಯದಿದ್ದರೆ ಮಾರ್ಟ್ ಮುಚ್ಚಿಸಲಾಗುವುದು ಎಂದು ನಗರದ ಉಲ್ಲಾಳದ ಹಿಂದವೀ ಮಾರ್ಟ್ ಮಾಲೀಕನಿಗೆ ಬಿಬಿಎಂಪಿ ರಾಜರಾಜೇಶ್ವರಿ ವಲಯ ಕಚೇರಿಯಿಂದ ಜಾರಿ ಮಾಡಿರುವುದಾಗಿ ನೋಟೀಸ್​ನಲ್ಲಿ ಎಚ್ಚರಿಸಲಾಗಿದೆ.

ಹಲಾಲ್ ಕಟ್ ವಿರುದ್ಧ ನಡೆದಿದ್ದ ಪ್ರಚಾರದಲ್ಲಿ ಹಿಂದವೀ ಮೀಟ್ ಮಾರ್ಟ್ ಸಕ್ರಿಯವಾಗಿತ್ತು. ಆದರೆ ವ್ಯಾಪಾರ ನಡೆಸಲು ಹಿಂದವೀ ಮೀಟ್ ಮಾರ್ಟ್​ಗಳು ಪಾಲಿಕೆಯಿಂದ ಲೈಸನ್ಸ್ ಪಡೆದಿಲ್ಲ. ಹಾಗಾಗಿ ಹಲವು ಅಂಶಗಳನ್ನು ಉಲ್ಲೇಖಿಸಿ ಏಪ್ರಿಲ್ 12ರಂದು ಬಿಬಿಎಂಪಿ ನೋಟಿಸ್​ ನೀಡಿರುವುದು ಬೆಳಕಿಗೆ ಬಂದಿದೆ.

ಮಟನ್ ಸ್ಟಾಲ್ ಪರವಾನಗಿ ಶುಲ್ಕ ಎಷ್ಟು?:

ಕೇವಲ ಕೋಳಿ ಅಂಗಡಿಯಾದರೆ ಪರವಾನಗಿ ಶುಲ್ಕ 2,500 ರೂ. ಇರುತ್ತದೆ. ಕೋಳಿಯ ಜೊತೆಗೆ ಮಟನ್ ಮತ್ತು ಫಿಶ್ ಮಳಿಗೆ ನಡೆಸುವುದಿದ್ದರೆ 10,500 ರೂ. ಶುಲ್ಕ ಪಾವತಿಸಬೇಕು. ಪ್ರತಿವರ್ಷ ಶುಲ್ಕ ಪಾವತಿಸಬೇಕು. ಮೊದಲ ಬಾರಿಗೆ ಪರವಾನಿಗೆ ಪಡೆಯಲು ಇದೇ ಶುಲ್ಕ ಅನ್ವಯವಾಗುತ್ತದೆ ಎಂದು ಪಾಲಿಕೆ ಹೇಳಿದೆ.

ಇತ್ತೀಚೆಗೆ ತಲೆ ಎತ್ತಿರುವ ಜಟ್ಕಾ ಕಟ್‌ ಮಾಂಸದ ಅಂಗಡಿಗಳು ಪಾಲಿಕೆ ನೀಡುವ ಪರವಾನಗಿ ಪಡೆದುಕೊಂಡಿಲ್ಲ. ಮಾಂಸ ಮಾರಾಟ ಮಾಡುವ ಮಳಿಗೆಯಲ್ಲಿಯೇ ಅನಧಿಕೃತ ಪ್ರಾಣಿ ವಧೆ, ಮಾಂಸದ ಮಳಿಗೆಯಲ್ಲಿ ಗ್ಲಾಸ್ ಅಳವಡಿಸದೇ ಇರುವುದು, ಇನ್​ಸೆಕ್ಟ್ ಟ್ರ್ಯಾಪ್ ಅಳವಡಿಸಿಲ್ಲ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಸಿಬ್ಬಂದಿಯ ವಾರ್ಷಿಕ ಆರೋಗ್ಯ ತಪಾಸಣೆಯ ಪತ್ರ ಒದಗಿಸಿಲ್ಲ. ಮಾಂಸ ಕತ್ತರಿಸುವ ಉಪಕರಣಗಳನ್ನು ಸಮರ್ಪಕ ರೀತಿಯಲ್ಲಿ ಶುದ್ಧಗೊಳಿಸುತ್ತಿಲ್ಲ. ಮಾಂಸ, ಕೋಳಿ ಮಾರಾಟ ಮಳಿಗೆಯಲ್ಲಿ ಗಾಳಿ, ಬೆಳಕು, ಶುದ್ಧ ನೀರಿನ ವ್ಯವಸ್ಥೆ ಇಲ್ಲ. ಮಾಂಸದ ಅಂಗಡಿಯಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯ ವ್ಯವಸ್ಥಿತವಾಗಿ ವಿಲೇವಾರಿ ಮಾಡುತ್ತಿಲ್ಲ ಎನ್ನುವ ದೂರುಗಳು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

19/04/2022 10:48 pm

Cinque Terre

1.44 K

Cinque Terre

0

ಸಂಬಂಧಿತ ಸುದ್ದಿ