ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಧಿಕಾರಿಗಳ ಪಿತೂರಿಯೇ ನನ್ನ ಮನೆ ಮೇಲೆ ಎಸಿಬಿ ದಾಳಿಗೆ ಕಾರಣ;ಬ್ರೋಕರ್ ಅಶ್ವಥ್

ಬೆಂಗಳೂರು: ನಾನೇನು ಬ್ರೋಕರ್ ಅಲ್ಲ. ನನ್ನ ಮೇಲೆ ಬಿಡಿಎ ಅಧಿಕಾರಿಗಳು ಪಿತೂರಿ ಮಾಡಿದ್ದಾರೆ. ಈ ಕಾರಣದಿಂದಲೇ ನನ್ನ ಮೇಲೆ‌ ಎಸಿಬಿ ಅಧಿಕಾರಿಗಳಿಂದ ದಾಳಿ ಮಾಡಿಸಿದ್ದಾರೆ ಎಂದು ಅಶ್ವಥ್ ಕಿಡಿಕಾರಿದ್ದಾರೆ. ದಾಳಿ ಅಂತ್ಯ ಬಳಿಕ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅಶ್ವಥ್, ಇಂದು ನನ್ನ ಮನೆ ಮೇಲೆ‌ ಎಸಿಬಿ ಅಧಿಕಾರಿಗಳು ಬಂದು ದಾಳಿ ಮಾಡಿದ್ರು. ನಾವು ಅದಕ್ಕೆ ಸಹಕಾರ ಕೊಟ್ಟಿದ್ದೇವೆ. ಅವರ ಕೆಲಸ ಅವರು ಮಾಡಿದ್ದಾರೆ. ನಮ್ಮ ಕುಟುಂಬದ ಒಟ್ಟು 40 ಎಕರೆ ಜಮೀನು ಹೋಗಿದೆ‌. ಈ‌‌ ನಿಟ್ಟಿನಲ್ಲಿ ಹೋರಾಟ ಮಾಡುತ್ತಿರುವೆ. ನಾನು ಸಿವಿಲ್ ಸರ್ವೆಂಟ್ ಅಲ್ಲ. ಖಾಸಗಿ ವ್ಯಕ್ತಿ,ನನ್ನ ಮೇಲೆ ಹೇಗೆ ದಾಳಿ ಮಾಡಿದ್ರಿ ಎಂದು ಕೇಳಿದ್ದೆ. ಅದಕ್ಕೆ ನಮಗೆ ವಾರೆಂಟ್ ಇದೆ ಎಂದು ಎಸಿಬಿ ಅಧಿಕಾರಿಗಳು ಹೇಳಿದ್ದರು.

ವಿಶ್ವೇಶ್ವರಯ್ಯ ಲೇಔಟ್ ನಲ್ಲಿ ರೈತರು ಜಮೀನು ಕಳೆದುಕೊಂಡಿರುವ ವಿಚಾರಕ್ಕೆ ನಾನು ಲೀಡರ್ ಶಿಫ್ ವಹಿಸಿಕೊಂಡು ಕೆಲಸ ಮಾಡಿದ್ದೆ. ರೈತರಿಗೆ ಹಣ ಕೊಟ್ಟಿಲ್ಲಾ, ಈ ವಿಚಾರಕ್ಕೆ ನಾನು ಹೋರಾಡುತ್ತಿದ್ದೆ. ಯಾವ, ಯಾವ ರೈತರಿಗೆ ಅನ್ಯಾಯ ಆಗಿದೆ ಅದನ್ನು ಪ್ರತಿಭಟನೆ ಮಾಡ್ತಿವಿ. ನಮ್ಮ ಹಳ್ಳಿಯ ಎಲ್ಲಾ ರೈತರನ್ನು ಒಗ್ಗೂಡಿಸಿ ಪ್ರತಿಭಟನೆ ಮಾಡಿಸುತ್ತೇನೆ. ಅಧಿಕಾರಿಗಳ ಕೊರಳ ಪಟ್ಟಿ ಹಿಡಿದು ಕೆಲಸ ಮಾಡಿಸದೆ ಬಿಡುವುದಿಲ್ಲ. ವಿಶ್ವೇಶ್ವರಯ್ಯ ಲೇಔಟ್ ನಲ್ಲಿ 1,600 ಕೋಟಿ ಹಣ ಬಂದಿದೆ. ಆದರೆ, ಅದನ್ನು ರೈತರಿಗೆ ಕೊಟ್ಟಿಲ್ಲಾ. ಅದನ್ನು ಬಿಟ್ಟು ಬೇರೆ ಬೇರೆ ಕಡೆ ಕೆಲಸ ಮಾಡ್ತಿದ್ದಾರೆ. ಬಿಡಿಎ ಕಮಿಷನರ್ ರಾಜೇಶ್ ಗೌಡ ಇದಕ್ಕೆಲ್ಲಾ‌ ಕಾರಣ ಎಂದು ಆರೋಪಿಸಿದ್ದಾರೆ. ಮಧ್ಯವರ್ತಿ ಗಳು ಸೇರಿಕೊಂಡು ಬಿಡಿಎ ಆಸ್ತಿ ಕಬಳಿಸುತ್ತಿದ್ದಾರೆ ಎಂದು ಅಶ್ವಥ್ ಆರೋಪಿಸಿದ್ದಾರೆ.

Edited By :
Kshetra Samachara

Kshetra Samachara

22/03/2022 05:06 pm

Cinque Terre

3.29 K

Cinque Terre

0

ಸಂಬಂಧಿತ ಸುದ್ದಿ