ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇವನಹಳ್ಳಿ: "ಗೋಮಾಳ ಜಮೀನು ಹಂಚಿ ನಮ್ಮ ಬಾಳು ಉಳಿಸಿ"; ಗ್ರಾಮಸ್ಥರ ಅಳಲು

‌ಬೆಂಗಳೂರು: ರಾತೋರಾತ್ರಿ ಜನ ಗೋಮಾಳ ಜಮೀನಿನಲ್ಲಿ ಗುಡಿಸಲು ನಿರ್ಮಿಸಿದ್ದಾರೆ. ಗೋಮಾಳ ರಕ್ಷಿಸಿ, ನಿವೇಶನ ಮಾಡಿ ಹಂಚುವಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಆದರೆ, ಇದ್ದ ಗೋಮಾಳ ಜಮೀನನ್ನು ಅಕ್ಕಪಕ್ಕದ ಬಲಾಢ್ಯರು ಒತ್ತುವರಿ ಮಾಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಹೋರಾಟದ ಹಾದಿ ಹಿಡಿದಿದ್ದಾರೆ.

ಬೆಂಗಳೂರು ಗ್ರಾಮಾಂತರ ದೇವನಹಳ್ಳಿಯ ಇರಿಗೇನಹಳ್ಳಿ ಸರ್ವೆ ನಂ 33ರಲ್ಲಿ 6 ಎಕರೆ 26 ಗುಂಟೆ ಗೋಮಾಳ ಇದೆ. ಈ ಸರ್ಕಾರಿ ಗೋಮಾಳ ಬಿಟ್ಟರೆ, ಇರಿಗೇನಹಳ್ಳಿ ಹಾಗೂ ಬಿಡಿಗಾನಹಳ್ಳಿ ಗ್ರಾಮಸ್ಥರಿಗೆ ಯಾವುದೇ ಸರ್ಕಾರಿ ಜಾಗ ಇಲ್ಲ. ಹೀಗಾಗಿ ಗೋಮಾಳದಲ್ಲಿ ನಿವೇಶನ ಇಲ್ಲದವರಿಗೆ ಆಶ್ರಯ ಯೋಜನೆಯಡಿ ಸೈಟ್ ನೀಡುವಂತೆ ಹತ್ತು ವರ್ಷಗಳಿಂದ ಕೇಳುತ್ತಿದ್ದಾರೆ. ಆದರೆ, ಅಧಿಕಾರಿಗಳು ಗಮನಹರಿಸಿಲ್ಲ. ಇದ್ದ ಗೋಮಾಳವನ್ನು ಬಲಿಷ್ಠರು ಒತ್ತುವರಿ ಮಾಡಿಕೊಂಡಿದ್ದಾರೆ. ಹೀಗಾಗಿ ಗೋಮಾಳದಲ್ಲಿ ಗುಡಿಸಲು ನಿರ್ಮಿಸಿರುವ ನೂರಾರು ಕುಟುಂಬ ನಿವೇಶನ ನೀಡುವಂತೆ ಒತ್ತಾಯಿಸಿದ್ದಾರೆ.

ಇರಿಗೇನಹಳ್ಳಿಯ 6 ಎಕರೆ 26 ಗುಂಟೆ ಗೋಮಾಳದಲ್ಲಿ ನಿವೇಶನ ಹಂಚಿಕೆ ಮಾಡಲು ಎಲ್ಲಾ ಅಧಿಕಾರಿಗಳಿಗೂ ಮನವಿ ಮಾಡಲಾಗಿದೆ. ಪ್ರಭಾವಿಗಳು ಸಾಕಷ್ಟು ಒತ್ತುವರಿ ಮಾಡಿ ಕಬಳಿಸಿದ್ದು, ಇನ್ನೂ 6 ಎಕರೆಲಿ ಇದೀಗ ಕೇವಲ ಒಂದೂವರೆ ಎಕರೆ ಮಾತ್ರ ಉಳಿದಿದೆ. ಇದ್ರಿಂದಾಗಿ ಗೋಮಾಳ ಸರ್ವೆ ಮಾಡಿ ಸರ್ಕಾರಿ ಭೂಮಿ ಉಳಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿ.ಸಿ. ಶ್ರೀನಿವಾಸ್, ಗೋಮಾಳ ಜಮೀನು ಇರೋದು ಮಾಹಿತಿ ಬಂದಿದೆ. ಜತೆಗೆ ಒತ್ತುವರಿಯಾಗಿರೋದು ಗಮನಕ್ಕೆ ಬಂದಿದ್ದು, ಸರ್ವೆ ಮಾಡಿಸಿ ಕ್ರಮ ಕೈಗೊಳ್ತೇವೆ ಎಂದರು.

ಕೋಟ್ಯಂತರ ಮೌಲ್ಯದ ಸರ್ಕಾರಿ ಗೋಮಾಳ ಒತ್ತುವರಿಯಾಗಿ ಉಳ್ಳವರ ಪಾಲಾಗ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಗೋಮಾಳ ಜಾಗ ಸರ್ವೆ ಮಾಡಿಸಿ ಉಳಿಸೋ ಕೆಲಸ ಮಾಡಬೇಕಿದೆ. ಜತೆಗೆ ನಿವೇಶನಕ್ಕಾಗಿ ಗುಡಿಸಲು ನಿರ್ಮಿಸಿ ಹೋರಾಟ ನಡೆಸ್ತಿರೋ ಬಡವರಿಗೆ ನ್ಯಾಯ ಒದಗಿಸಬೇಕಿದೆ.

SureshBabu.Public Next. Devanahalli.

Edited By : Nagesh Gaonkar
PublicNext

PublicNext

14/03/2022 08:20 pm

Cinque Terre

39.22 K

Cinque Terre

0

ಸಂಬಂಧಿತ ಸುದ್ದಿ