ಬೆಂಗಳೂರು: ಕಳೆದ ಕೆಲ ದಿನಗಳಿಂದ ನೈಸ್ ರಸ್ತೆಯಲ್ಲಿ ಅಪಘಾತಗಳು ಹೆಚ್ಚಾದ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಬೈಕ್ ಓಡಾಟವನ್ನು ಬಂದ್ ಮಾಡಲಾಗಿದೆ. ನಗರ ಸಂಚಾರ ಪೊಲೀಸರು ರಾತ್ರಿ 10ರಿಂದ ಬೆಳಿಗ್ಗೆ 5ರವರೆಗೆ ಬೈಕ್ ಚಾಲನೆ ವೇಳೆ ನಿಷೇಧಿಸಿದ್ದರು. ಇಷ್ಟಾಗ್ಯೂ ಹೈ ಸ್ಪೀಡ್‌ನಿಂದಾಗಿ ನೈಸ್ ರಸ್ತೆಯಲ್ಲಿ ಆಕ್ಸಿಡೆಂಟ್ ಹೆಚ್ಚಾಗುತ್ತಿವೆ. ಆಕ್ಸಿಡೆಂಟ್ ಆದ ಬಹುತೇಕ ಬೈಕ್ ಸವಾರಾರು ಸಾವನ್ನಪ್ಪಿದ್ದಾರೆ. ಇದರಿಂದ ಬೈಕ್ ಮತ್ತು ಕಾರುಗಳೊಗೆ ಸ್ಪೀಡ್ ಬ್ರೇಕ್ ಹಾಕಲು ಸಂಚಾರ ಪೊಲೀಸರು ನೈಸ್ ರಸ್ತೆಯಲ್ಲಿ ದಂಡಾಸ್ತ್ರದ ಮೊರೆ ಹೋಗಿದ್ದಾರೆ.
ಕುಮಾರಸ್ವಾಮಿ ಲೇಔಟ್ ಟ್ರಾಫಿಕ್ ಸ್ಟೇಷನ್ ಎಎಸ್‌ಐ ನಾಗರಾಜ್ ಅವರು ನಿನ್ನೆ (ಭಾನುವಾರ) ಕೈಗೊಂಡಿದ್ದ ವಿಶೇಷ ಕಾರ್ಯಾಚರಣೆಯಲ್ಲಿ ಒಂದೇ ದಿನ 126 ಪ್ರಕರಣ ದಾಖಲಿಸಿ, 1.27 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ.
ಒಂದೇ ದಿನ ಒಬ್ಬ ಅಧಿಕಾರಿ ಈ ಮಟ್ಟದ ಫೈನ್ ಕಲೆಕ್ಟ್ ಮಾಡಿರುವುದು ಇದೆ ಮೊದಲು ಎನ್ನಲಾಗುತ್ತಿದೆ. ಕನಕಪುರ ನೈಸ್ ರಸ್ತೆಯ ಟೋಲ್ ಸಮೀಪ ಅತಿವೇಗದ ಚಾಲನೆಯಿಂದ ಬರುತ್ತಿದ್ದ ವಾಹನಗಳ ಮೇಲೆ ಈ ದಂಡಾಸ್ತ್ರ ಪ್ರಯೋಗವಾಗಿದೆ. ಇನ್ನೂ ಇನ್ಸ್‌ಪೆಕ್ಟರ್ ಸೂಚನೆ ಮೇರೆಗೆ ವೆಂಕಟೇಶ ನೇತೃತ್ವದಲ್ಲಿ ಎಎಸ್ಐ ಜಿ.ಎನ್.ನಾಗರಾಜ್ ಅಂಡ್ ಟೀಂ ಸಂಚಾರ ಅರಿವಿನ ಜೊತೆಗೆ ಅತಿವೇಗವಾಗಿ ಚಾಲನೆ ಮಾಡಿದ ಚಾಲಕರ ವಿರುದ್ಧ ಒಂದೇ ದಿನದಲ್ಲಿ 126 ಪ್ರಕರಣಗಳನ್ನು ದಾಖಲಿಸಿ 1.27 ಲಕ್ಷ ದಂಡ ವಸೂಲಿ ಮಾಡಿರೋದಕ್ಕೆ ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Kshetra Samachara
21/02/2022 08:51 am