ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿಡಿಎ ಅಕ್ರಮ- ನೌಕರರು ಸೇರಿ ಆರು ಮಂದಿ ಅರೆಸ್ಟ್

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಕ್ರಮ ಸಂಬಂಧ ನೌಕರರು ಸೇರಿ ಆರು ಜನರನ್ನು ಶೇಷಾದ್ರಿಪುರ ಪೊಲೀಸರು ಬಂಧಿಸಿದ್ದಾರೆ.

ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಲೋಹಿತ್ (32), ಕಂಪ್ಯೂಟರ್ ಆಪರೇಟರ್ ಸುನೀಲ್ (28), ಮಧ್ಯವರ್ತಿಗಳಾದ ವಿಕ್ರಮ್ ಜೈನ್, ಪವನ್, ಮಂಜು ನಾಯಕ್ ಹಾಗೂ ರಾಮಚಂದ್ರ ಬಂಧಿತರು. ಬಿಡಿಎ ಟಾಸ್ಕ್ ಫೋರ್ಸ್ ಟೀಂ ಕಳೆದ ವಾರ 8 ಮಂದಿಯ ವಿರುದ್ಧ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ನಿವೇಶನಗಳ ಹಂಚಿಕೆ ಆರೋಪದಡಿ FIR ದಾಖಲಿಸಿತ್ತು.

ಬಿಡಿಎ ನಿವೇಶನ ವಂಚನೆ ಸಂಬಂಧ ಇತ್ತೀಚೆಗೆ ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿದ್ದವು. ಲಭ್ಯವಿರುವ ಪುರಾವೆಗಳನ್ನು ಆಧರಿಸಿ 6 ಮಂದಿಯನ್ನು ಬಂಧಿಸಲಾಗಿದೆ. ಮತ್ತಷ್ಟು ಮಂದಿ ಅಕ್ರಮದಲ್ಲಿ ಭಾಗಿಯಾಗಿದ್ದು, ಅವರನ್ನು ಪತ್ತೆ ಮಾಡಲಾಗುತ್ತಿದೆ. ಆರೋಪಿಗಳ ಕೃತ್ಯದಿಂದ ಯಾರಿಗಾದರೂ ವಂಚನೆಯಾಗಿದ್ದರೆ, ಠಾಣೆಗೆ ದೂರು ನೀಡಬಹುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Edited By : Vijay Kumar
PublicNext

PublicNext

28/01/2022 10:54 am

Cinque Terre

23.43 K

Cinque Terre

0

ಸಂಬಂಧಿತ ಸುದ್ದಿ