ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಗಾಡಿ ಜತೆ ಹೆಂಡ್ತೀನೂ ಸೀಜ್ ಮಾಡಿ ಎಂದ !

ಬೆಂಗಳೂರು: ಚಿಕನ್ ಕೊಳ್ಳಲು ಬಂದ ವ್ಯಕ್ತಿಯೊಬ್ಬರ ವಾಹನವನ್ನು ಸೀಜ್ ಮಾಡಲು ಮುಂದಾದಾಗ ಆತ ಗಾಡಿ ಜತೆ ಹೆಂಡತಿಯನ್ನೂ ಸೀಜ್ ಮಾಡಿ ಎಂದು ಸವಾಲು ಹಾಕಿದ ಘಟನೆ ಬೆಂಗಳೂರು ನಿನ್ನೆ ನಡೆದಿದೆ.

ವಿಕೇಂಡ್ ಕರ್ಪ್ಯೂ ಹಿನ್ನೆಲೆಯಲ್ಲಿ ಮಾರ್ಕೆಟ್ ಸರ್ಕಲ್ ಬಳಿ ಮಂಜುನಾಥ್ ಎಂಬುವವರ ಬೈಕ್ ಪೊಲೀಸರು ಹಿಡಿದ್ರಂತೆ. ಆಗ ತರಕಾರಿ ತರಲು ಅವಕಾಶ ಇದೆ. ಅದೇ ಚಿಕನ್ ತರಲು ಅವಕಾಶ ಏಕಿಲ್ಲ ಎಂದು ಪೊಲೀಸರಿಗೆ ಸವಾಲ್ ಹಾಕಿದ್ದಾನೆ.

ಬಳಿಕ ಪೊಲೀಸರು ಪಟ್ಟು ಬಿಡದಿದ್ದಾಗ ಮನೆಗೆ ಬಂದು ಹೆಂಡತಿ, ಮಕ್ಕಳನ್ನು ಸೀಜ್ ಮಾಡಿ ಎಂದು ಪೊಲೀಸರಿಗೇನೆ ಮರು ಪ್ರಶ್ಮೆ ಹಾಕಿದ್ದಾನೆ. ಅದ್ಕೆ ಅವಕ್ಕಾದ ಪೊಲೀಸರು ಗಾಡಿ ಬಿಟ್ಟು ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

Edited By :
Kshetra Samachara

Kshetra Samachara

10/01/2022 10:19 am

Cinque Terre

488

Cinque Terre

0

ಸಂಬಂಧಿತ ಸುದ್ದಿ