ಬೆಂಗಳೂರು:ರಾಜ್ಯದಲ್ಲಿ ಒಮಿಕ್ರಾನ್ ನಿಯಂತ್ರಣಕ್ಕೆ 50-50 ರೂಲ್ಸ್ ಜಾರಿಗೆ ಆಗುತ್ತಿದೆ. ಹೋಟೆಲ್,ಪಬ್,ಕ್ಲಬ್ ಗಳಲ್ಲಿ ಈ ನಿಯಮವೇ ಅನ್ವಯ ಆಗುತ್ತದೆ.ಆದರೆ ಆರಂಭದಲ್ಲಿಯೇ ಈ ರೂಲ್ಸ್ ಗೆ ಹೋಟೆಲ್ ಮಾಲೀಕರ ಸಂಘ ವಿರೋಧಿಸಿದೆ. ನಿಯಮ ಸಡಿಲಿಕೆ ಮಾಡಿ ಅಂತಲೇ ಒತ್ತಾಯಿಸುತ್ತಿದೆ.
ಮಾರುಕಟ್ಟೆ ,ಬಸ್, ರೈಲ್ವೆಯಲ್ಲಿ ಯಾವುದೇ ನಿರ್ಬಂಧ ಹಾಕಿಲ್ಲ.ಆದರೆ ಹೋಟೆಲ್ ನಲ್ಲಿ ಕುಳಿತು ಊಟ-ತಿಂಡಿ ಮಾಡುವವರಿಗೆ ಮಾತ್ರ ನಿರ್ಬಂದ ಹಾಕಲಾಗಿ ಎಂದು ರಾಜ್ಯ ಹೋಟೆಲ್ ಮಾಲೀಕರ ಸಂಘದ ಮುಖಂಡ ಮುಧುಕರ್ ಶೆಟ್ಟಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಸರ್ಕಾರದ ನಿರ್ಧಾರ ಹೋಟೆಲ್ ಉದ್ಯಮಿಗಳಿಗೆ ಅಘಾತ ನೀಡಿದೆ.ಸರ್ಕಾರ ಆದೇಶ ಮರುಪರಿಶೀಲನೆ ಮಾಡಬೇಕು.
ಶೇ 50 ರಷ್ಟು ನಿರ್ಬಂಧ ರದ್ದು ಮಾಡಬೇಕೆಂದು ಮುಧುಕರ್ ಶೆಟ್ಟಿ ಒತ್ತಾಯಿಸಿದ್ದಾರೆ.
Kshetra Samachara
26/12/2021 01:41 pm