ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಯಲಹಂಕದ ಸೂಕ್ಷ್ಮಪ್ರದೇಶ ದೊಡ್ಡಬೆಟ್ಟಹಳ್ಳಿಯಲ್ಲಿ ಗಣೇಶ ಮೆರವಣಿಗೆಗೆ ಪೊಲೀಸ್ ಸರ್ಪಗಾವಲು

ಯಲಹಂಕ: ಯಲಹಂಕದ ದೊಡ್ಡಬೆಟ್ಟಹಳ್ಳಿ ಮತ್ತು ಚಿಕ್ಕಬೆಟ್ಟಹಳ್ಳಿಯ ಮಸೀದಿ ಪ್ರದೇಶ ಗಣೇಶ ಮೆರವಣಿಗೆ ನಡೆಯುವ ಅತ್ಯಂತ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲ್ಪಟ್ಟಿದೆ. ವಿದ್ಯಾರಣ್ಯಪುರ ಮತ್ತು ಯಲಹಂಕದ ಸಂಭ್ರಮ್ ಕಾಲೇಜ್ ಬಳಿಯಿಂದ 40ಕ್ಕೂ ಹೆಚ್ಚು ಗಣೇಶ ಮೂರ್ತಿಗಳು ಇದೇ ದೊಡ್ಡಬೆಟ್ಟಹಳ್ಳಿ ಮಸೀದಿ ಮೂಲಕವೇ ಹಾದು ಹೋಗಬೇಕು. ಕಳೆದ 15-20 ವರ್ಷಗಳ ಹಿಂದೆ ಇಲ್ಲಿ ಗಣೇಶ ಮೆರವಣಿಗೆ ವೇಳೆ ಗಲಾಟೆಗಳಾಗಿ ಅಹಿತಕರ ಘಟನೆಗಳು ಮಡೆದಿದ್ದವು. ಇದರ ಅಂಗವಾಗಿ ದೊಡ್ಡಬೆಟ್ಟಹಳ್ಳಿ ಬಳಿ‌ ಪೊಲೀಸ್ ಸರ್ಪಗಾವಲೇ ಏರ್ಪಟ್ಟಿತ್ತು.

ದೊಡ್ಡಬೆಟ್ಟಹಳ್ಳಿ ಬಳಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಮೆರವಣಿಗೆ ನಡೆಯುವ ಸಂಭ್ರಮ್ ಕಾಲೇಜಿನಿಂದ ಅಲ್ಲಾಳಸಂದ್ರ ಕೆರೆಯವರೆಗೂ ಬೆಂಗಳೂರು ಈಶಾನ್ಯ ವಿಭಾಗದ ಪೊಲೀಸರ ಜೊತೆಗೆ ಬೆಂಗಳೂರು ನಗರದ ಒಟ್ಟು 1600 ಜನ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು. ಹೆಚ್ಚಿನ ಬಂದೋಬಸ್ತ್‌ಗಾಗಿ 15.KSRP ತುಕಡಿ, ಎಮರ್ಜೆನ್ಸಿಗಾಗಿ ವಿಶೇಷ ತುಕಡಿಗಳು, ಈಶಾನ್ಯ ವಿಭಾಗದ ಡಿಸಿಪಿ, ಮೂರು ಜನ ಎಸಿಪಿಗಳು 15ಕ್ಕೂ ಹೆಚ್ಚು ಇನ್‌ಸ್ಪೆಕ್ಟರ್‌ಗಳು ಬಂದೋಬಸ್ತ್ ಗಾಗಿ ನಿಯೋಜನೆಯಾಗಿದ್ದರು.

ಸಂಭ್ರಮ್ ಕಾಲೇಜಿನಿಂದ ಅಲ್ಲಾಳಸಂದ್ರ ವರೆಗಿನ ಸುಮಾರು ಆರರಿಂದ ಏಳು ಕಿ.ಮೀ.ಮೆರವಣಿಗೆ ಈಶಾನ್ಯ ವಿಭಾಗದ ಪೊಲೀಸರು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದಾರೆ. ಜೊತೆ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಸಂಚಾರ ಮಾರ್ಗಗಳ ವ್ಯವಸ್ಥೆ ಮಾಡಿ ಅನುಕೂಲ‌ ಮಾಡಿಕೊಟ್ಟಿದ್ದಾರೆ.

Edited By :
PublicNext

PublicNext

04/09/2022 09:31 pm

Cinque Terre

46.56 K

Cinque Terre

0

ಸಂಬಂಧಿತ ಸುದ್ದಿ