ದೊಡ್ಡಬಳ್ಳಾಪುರ: ಕನ್ನಡಿಗರ ಅವಹೇಳನ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಆತ್ರೇಯಾ ಆರ್ಯವೇದ ವಿಶ್ವವಿದ್ಯಾಲಯದ ವಿದ್ಯಾರ್ಥಿ ಗೂಸಾ ತಿಂದಿದ್ದಾನೆ. ಘಟನೆ ನಂತರ ಬಸ್ ಡ್ರೈವರ್ ಮೇಲೆ ಹಲ್ಲೆ ನಡೆಸಿದ್ದಾರೆ.
ದೊಡ್ಡಬಳ್ಳಾಪುರ ನಗರ ಹೊರವಲಯದ ಕೋಡಿಗೆಹಳ್ಳಿಯಲ್ಲಿ ಇಂದು ಶುಕ್ರವಾರ ಸಂಜೆ 4 ಗಂಟೆ ಸಮಯದಲ್ಲಿ ಘಟನೆ ನಡೆದಿದೆ. ಕೋಡಿಹಳ್ಳಿ ಬಳಿಯ ಆತ್ರೇಯಾ ಆರ್ಯುವೇದ ವೈದಕೀಯ ಮಹಾವಿಶ್ವವಿದ್ಯಾಲಯದಲ್ಲಿ ದೇಶದ ವಿವಿಧ ರಾಜ್ಯದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕಾಲೇಜ್ ಅವಧಿ ಮುಗಿದ ನಂತರ ವಿದ್ಯಾರ್ಥಿಗಳನ್ನ ಕಾಲೇಜ್ ಬಸ್‌ನಲ್ಲಿ ಡ್ರಾಪ್ ಮಾಡುವಾಗ ಬಸ್‌ನಲ್ಲಿ ಉತ್ತರ ಭಾರತದ ವಿದ್ಯಾರ್ಥಿಗಳು ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅವಹೇಳನಕಾರಿಯಾಗಿ ಮಾತನಾಡಿದ ವಿದ್ಯಾರ್ಥಿಗೆ ಗೂಸಾ ನೀಡಿದ್ದಾರೆ.
ಪೊಲೀಸರು ಬರುತ್ತಿರುವ ಸುದ್ದಿ ತಿಳಿದ ವಿದ್ಯಾರ್ಥಿಗಳು ಗಲಾಟೆ ಜಾಗದಿಂದ ಪರಾರಿಯಾಗಿದ್ದಾರೆ. ಹಲ್ಲೆಗೊಳಗಾದ ವಿದ್ಯಾರ್ಥಿ ಮತ್ತು ಆತನ ಸ್ನೇಹಿತರು ಹಲ್ಲೆ ಮಾಡಿದವರ ಪತ್ತೆಗಾಗಿ ರಸ್ತೆಯಲ್ಲಿಯೇ ಕಟ್ಟಿಗೆ ಹಿಡಿದು ಹುಡುಕಾಡಿದ್ದಾರೆ. ದೊಡ್ಡಮ್ಮ ದೇವಸ್ಥಾನದ ಬಳಿ ಅಡ್ಡಗಟ್ಟಿದ ಹಲ್ಲೆಗೊಳಗಾದ ವಿದ್ಯಾರ್ಥಿ ಮತ್ತು ಸ್ನೇಹಿತರು ಹಲ್ಲೆ ನಡೆಸಿ ಅಲ್ಲಿಂದ ಪರಾರಿಯಾಗಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
PublicNext
22/07/2022 08:36 pm