ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಡ್ಯಾನ್ಸ್ ಮಾಡಿ ಜಾಗೃತಿ ಮೂಡಿಸುತ್ತಿರುವ ಯುವಕ

ಸೂಟು ಬೂಟು ಹಾಕಿಕೊಂಡು ತಲೆಗೊಂದು ಹೆಲ್ಮೆಟ್ ಧರಿಸಿ ಗಾಡಿ ಏರಿ ಟ್ರಾಫಿಕ್ ಸಿಗ್ನಲ್‌ನಲ್ಲಿ ಬಂದು ಗಾಡಿ ನಿಲ್ಲಿಸುವ ಯುವಕ ಮಾಡೋದಾದರೂ ಏನು ಗೊತ್ತಾ..? ಬನ್ನಿ ನಾವು ನಿಮಗೆ ತೋರಿಸುತ್ತೇವೆ. ಟ್ರಾಫಿಕ್‌ಗೆ ಅಂತಾನೆ ಹೆಸರು ವಾಸಿಯಾಗಿರುವ ಬೆಂಗಳೂರಿನಲ್ಲಿ ಯಾವ ರಸ್ತೆ ನೋಡಿದರೆ ಸಾಕು ಟ್ರಾಫಿಕ್ ಜಾಮ್ ಆಗಿರುತ್ತೆ. ಇನ್ನು ಅದೆಷ್ಟೋ ಯುವಕರು ಹೆಲ್ಮೆಟ್ ಧರಿಸದೆ ಟ್ರಾಫಿಕ್ ರೂಲ್ಸ್‌ಗಳನ್ನು ಗಾಳಿಗೆ ತೂರಿ ತಮ್ಮ ಜೀವಗಳ ಜೊತೆ ಬೇರೆಯವರ ಜೀವಗಳನ್ನೂ ಕೂಡ ಅಪಾಯದಲ್ಲಿ ಸಿಲುಕಿಸುತ್ತಾರೆ. ಆದರೆ ಈ ಯುವಕ ಟ್ರಾಫಿಕ್ ಸಿಗ್ನಲ್‌ನಲ್ಲಿ ಜನರಿಗೆ ಡ್ಯಾನ್ಸ್ ಮೂಲಕ ಟ್ರಾಫಿಕ್ ರೂಲ್ಸ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಈ ಯುವಕನ ಹೆಸರು ಮೋಹನ್ ಆಚಾರ್ಯ. ಇವರು ಟ್ರಾಫಿಕ್ ಸಿಗ್ನಲ್‌ಗಳನ್ನು ಕಂಡರೆ ಸಾಕು ಟ್ರಾಫಿಕ್‌ನಲ್ಲಿ ಡ್ಯಾನ್ಸ್ ಮಾಡಲು ಮುಂದಾಗುತ್ತಾರೆ. ಡ್ಯಾನ್ಸ್ ಮಾಡುತ್ತಾ ಜನರಲ್ಲಿ ಟ್ರಾಫಿಕ್ ರೂಲ್ಸ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಎಚ್ಎಸ್ಆರ್ ಲೇಔಟ್ ಅಗರ ಸಿಗ್ನಲ್‌ನಲ್ಲಿ ಮೋಹನ್ ಆಚಾರ್ಯ ಸತತ ಆರು ತಿಂಗಳಿನಿಂದ ತಮ್ಮ ವಾರಾಂತ್ಯದ ರಜೆ ವೇಳೆ ಟ್ರಾಫಿಕ್ ಸಿಗ್ನಲ್‌ನಲ್ಲಿ ಕುಣಿಯುತ್ತ ಜನರಲ್ಲಿ ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ನೀಡುತ್ತಿದ್ದಾರೆ. ಇವರ ಈ ಕಾರ್ಯಕ್ಕೆ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಮೋಹನ್ ಆಚಾರ್ಯ ಟ್ರಾಫಿಕ್ ರೂಲ್ಸ್ ಜಾಗೃತಿ ಮೂಡಿಸಲು ಕಾರಣ ಕೂಡ ಇದೆ. ಕೆಲವರ್ಷಗಳ ಹಿಂದೆ ಮೋಹನ್ ತನ್ನ ತಂದೆಯನ್ನು ರಸ್ತೆ ಅಪಘಾತದಲ್ಲಿ ಕಳೆದುಕೊಂಡಿದ್ದು ಮತ್ತು ಇವರ ಸ್ನೇಹಿತ ಒಬ್ಬ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದು. ಇದೆಲ್ಲ ಘಟನೆ ಕಂಡು ತನಗೆ ಆದ ನೋವು ಬೇರೆಯವರಿಗೆ ಆಗದಿರಲೆಂದು ಯುವಕರಿಗೆ ಮೋಹನ್ ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಮೋಹನ್ ಅವರ ವಿಡಿಯೋಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ. ಯುವ ಪೀಳಿಗೆಗೆ ಹೇಗೆ ಟ್ರಾಫಿಕ್ ನಿಯಮಗಳನ್ನು ಪಾಲಿಸಬೇಕೆಂದು ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಡ್ಯಾನ್ಸ್ ಮಾಡುತ್ತಾ ಜಾಗೃತಿ ಮೂಡಿಸುತ್ತಿರುವ ಇವರ ಕಾರ್ಯಕ್ಕೆ ಸಂಚಾರಿ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ನವೀನ್, ಪಬ್ಲಿಕ್ ನೆಕ್ಸ್ಟ್ ಬೆಂಗಳೂರು

Edited By :
PublicNext

PublicNext

10/08/2022 01:21 pm

Cinque Terre

25.04 K

Cinque Terre

1

ಸಂಬಂಧಿತ ಸುದ್ದಿ