ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಾರ್ವಜನಿಕ ರಸ್ತೆಯಲ್ಲಿ ವ್ಹೀಲಿಂಗ್ ಮಾಡಿ ಪುಂಡರ ಪುಂಡಾಟ

ನಗರದ ಆರ್.ಟಿ.ನಗರದಲ್ಲಿ ವ್ಹೀಲಿಂಗ್ ಪುಂಡರು ಪುಂಡಾಟ ತೋರಿದ್ದಾರೆ. ಆರ್.ಟಿ. ನಗರ ಸರ್ಕಾರಿ ಶಾಲೆ ಮುಂಭಾಗ ಅಪಾಯಕಾರಿಯಾಗಿ ವ್ಹೀಲಿಂಗ್ ಮಾಡಿರೋ ದೃಶ್ಯ ಈಗ ಸಾರ್ವಜನಿಕ ಮೊಬೈಲ್ ನಲ್ಲಿ ಸೆರೆಯಾಗಿದೆ.

ವ್ಹೀಲಿಂಗ್ ಪುಂಡಾಟಕ್ಕೆ ರಸ್ತೆಯಲ್ಲಿ ತೆರಳುವ ವಾಹನ ಸವಾರರು ಕಂಗಾಲಾಗಿದ್ದಾರೆ.ಕೊಂಚ ಯಾಮಾರಿದ್ರು ಜೀವಕ್ಕೆ ಕುತ್ತು ತರುವ ವ್ಹೀಲಿಂಗ್ ಮಾಡಿ ಪುಂಡರು ಪುಂಡಾಟ ತೋರಿದ್ದಾರೆ‌.

ಅಕ್ಕ-ಪಕ್ಕದಲ್ಲಿ ಬರುವ ವಾಹನಗಳಿಗೂ ತೊಂದರೆ ನೀಡುತ್ತಾ ವ್ಹೀಲಿಂಗ್ ಮಾಡುವ ಹುಚ್ಚಾಟವನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡು ಪುಂಡರು ಮಜಾ ತೆಗೆದುಕೊಳ್ತಿದ್ದಾರೆ.ಹಲವು ಬಾರಿ ಸ್ಥಳೀಯರು ವಾರ್ನ್ ಮಾಡಿದ್ರು ಕೇರ್ ಮಾಡದೆ ವ್ಹೀಲಿಂಗ್ ಮಾಡಿದ್ದಾರೆ.

Edited By :
PublicNext

PublicNext

07/04/2022 02:46 pm

Cinque Terre

36.94 K

Cinque Terre

6

ಸಂಬಂಧಿತ ಸುದ್ದಿ