ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಾಷ್ಟ್ರೀಯಮಟ್ಟದಲ್ಲಿ ಖ್ಯಾತಿ ಗಳಿಸಿದ್ದ ಪೊಲೀಸ್ ಶ್ವಾನ ನಿಧನ- ಪೊಲೀಸ್ ಗೌರವದೊಂದಿಗೆ ಅಂತ್ಯಕ್ರಿಯೆ

ಬೆಂಗಳೂರು: ರೇವಾ ಕಳೆದ ಹತ್ತು ವರ್ಷದಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ಶ್ವಾನ. ನಗರದಲ್ಲಿ ಎಲ್ಲೇ ಕ್ರೈಂ ನಡೆದರೂ ಈ ರೇವಾ ಅಲ್ಲಿ ಹಾಜರ್ ಇರುತ್ತಿತ್ತು. ತನ್ನ ಸರ್ವಿಸ್‌ನಲ್ಲಿ ಸಾಕಷ್ಟು ಅಪರಾಧ ಪತ್ತೆಗೆ ರೇವಾ ಕೊಟ್ಟ ಸುಳಿವು ಪೊಲೀಸರಿಗೆ ಸಾಕಷ್ಟು ಸಹಕಾರಿಯಾಗಿತ್ತು.‌ ಆದರೆ ಇಂದು ಆ ರೇವಾ ಪೊಲೀಸ್ ಇಲಾಖೆ ಬಿಟ್ಟು ಇಹಲೋಕ ತ್ಯಜಿಸಿದೆ. ವಯೋಸಹಜ ಹಿನ್ನೆಲೆ ರೇವಾ ಇಲಾಖೆ ಕರ್ತವ್ಯದಲ್ಲೇ ಪ್ರಾಣ ಬಿಟ್ಟಿದ್ದು, ಇಷ್ಟು ವರ್ಷ ಜೊತೆಗಿದ್ದ ರೇವಾ ಅಗಲಿಕೆಗೆ ಸಿಬ್ಬಂದಿ ಕಂಬನಿ ಮಿಡಿದಿದ್ದಾರೆ.

ರೇವಾ ಅಂತ್ಯಕ್ರಿಯೆ ಆಡುಗೋಡಿಯ ಸಿಎಆರ್ ಆವರಣಲ್ಲೇ ನಡೆದಿದ್ದು, ಪೊಲೀಸ್ ಗೌರವದೊಂದಿಗೆ ರೇವಾ ಅಂತ್ಯ ಕ್ರಿಯೆಯನ್ನು ಹಿರಿಯ ಅಧಿಕಾರಿಗಳು ನೆರವೇರಿಸಿದ್ದಾರೆ. ಗಾಡ್ ಆಫ್ ಆನರ್ ಮೂಲಕ ಮೃತ ರೇವಾ ಗೌರವ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಇನ್ನು ತಮಿಳುನಾಡು, ಪಂಜಾಬ್ ಹರಿಯಾಣ ಸೇರಿ ಹಲವು ರಾಜ್ಯಗಳಲ್ಲಿ ಪೊಲೀಸ್ ಶ್ವಾನ‌ ಕರ್ತವ್ಯ ಕೂಟದಲ್ಲಿ ಭಾಗವಹಿಸಿ ಬಹುಮಾನಗಳನ್ನು ಗೆದ್ದಿದ್ದು ವಿಶೇಷವಾಗಿತ್ತು.‌ ಅಲ್ಲದೆ ಹೊಸದಾಗಿ ಇಲಾಖೆ ಸೇರುವ ಶ್ವಾನಗಳಿಗೂ ರೇವಾ ಮಾದರಿಯಾಗಿತ್ತು.

ಶ್ರೀನಿವಾಸ್ ಚಂದ್ರ ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್

Edited By : Manjunath H D
PublicNext

PublicNext

18/03/2022 07:51 am

Cinque Terre

36 K

Cinque Terre

1

ಸಂಬಂಧಿತ ಸುದ್ದಿ