ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರ: ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಪರಿಸರ ಉಳಿಸಿ ಜನ ಜಾಗೃತಿ ವಾಕಥಾನ್!

ಯಲಹಂಕ:ರಕ್ತದಲ್ಲೂ ಪ್ಲಾಸ್ಟಿಕ್ ಸೂಕ್ಷ್ಮ ಕಣ ಸೇರಿಕೊಂಡು ಮನುಷ್ಯನ ಆರೋಗ್ಯ ದಿನೇ ದಿನೇ ನಾಶವಾಗುತ್ತಿದೆ. ಇದರಿಂದ ಎಚ್ಚೆತ್ತುಕೊಂಡ ಸರ್ಕಾರಗಳು ಪ್ಲಾಸ್ಟಿಕ್ ನಿಷೇಧಿಸಿದ್ದರು. ಜನ ಪ್ಲಾಸ್ಟಿಕ್ ಬಳಕೆಯನ್ನ ನಿಲ್ಲಿಸುತ್ತಿಲ್ಲ. ಪರಿಣಾಮ ಭೂಮಿ, ಗಾಳಿ ಮತ್ತು ನೀರು ಸಂಪೂರ್ಣವಾಗಿ ಕಲುಷಿತವಾಗುತ್ತಿವೆ. ಇದೀಗ ಜನಸಾಮಾನ್ಯರೆಲ್ಲರೂ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡುತ್ತಿದೆ. ಮತ್ತಷ್ಟು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅನೇಕ ಸಂಘ ಸಂಸ್ಥೆ ಸಹ ದುಡಿಯುತ್ತಿವೆ.

ಯಲಹಂಕ ಬಿಬಿಎಂಪಿ ವಲಯ ವ್ಯಾಪ್ತಿ ಕೊಡಿಗೇಹಳ್ಳಿ ಗುಂಡಾಂಜನೇಯ ದೇವಸ್ಥಾನ ಬಳಿಯಿಂದ ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಎಂಬ ಜನಜಾಗೃತಿ ವಾಕಥಾನ್ ಗೆ ಚಾಲನೆ ನೀಡಲಾಯ್ತು.

ಈ ವಾಕಥಾನ್ ನಲ್ಲಿ ಯಲಹಂಕದ ಶೇಷಾದ್ರಿಪುರಂ ಪಿ.ಯು.ಕಾಲೇಜಿನ ನೂರಕ್ಕು ಹೆಚ್ಚು ಸ್ಟೂಡೆಂಟ್ಸ್, ಲಯನ್ಸ್ ಕ್ಲಬ್, ರೋಟರಿ ಕ್ಲಬ್ ಸದಸ್ಯರು, ವಿವಿಧ ಶಾಲೆಗಳ ನೂರಾರು ಮಕ್ಕಳು, ಸ್ಥಳೀಯ ನಾಗರೀಕರು ವಾಕಾಥಾನ್‌ನಲ್ಲಿಭಾಗವಹಿಸಿದ್ದರು. ವಾಕಥಾನ್ ಮೆರವಣಿಗೆ ಕೊಡಿಗೇಹಳ್ಳಿ, ಸಹಕಾರನಗರ, ಸುತ್ತಮುತ್ತಲ ಪ್ರಮುಖ ರಸ್ತೆಗಳಲ್ಲಿ ಜನಜಾಗೃತಿಯ ಮೆರವಣಿಗೆ ನಡೆಸಿದರು.

Edited By : Somashekar
PublicNext

PublicNext

31/07/2022 05:44 pm

Cinque Terre

35.86 K

Cinque Terre

2

ಸಂಬಂಧಿತ ಸುದ್ದಿ