ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇವನಹಳ್ಳಿ: ಹಿಜಾಬ್ ಹಾಕಿ ಶಾಲೆಗೆ ಬಂದ ಶಿಕ್ಷಕಿಯನ್ನ ಮನೆಗೆ ಕಳಿಸಿದ ಮ್ಯಾನೇಜ್ಮೆಂಟ್

ದೇವನಹಳ್ಳಿ: ಸದ್ಯ ಬಿಸಿಬಿಸಿ ಚರ್ಚೆಯ ವಿಷಯವಾಗಿರುವ ಹಿಜಾಬ್ ರಗಳೆ ಇನ್ನು ನಿಂತಿಲ್ಲ. ಶಾಲಾ ಕಾಲೇಜುಗಳಲ್ಲಿ ಯಾವುದೇ ಧಾರ್ಮಿಕ - ಕೋಮು ಭಾವನೆ ಕೆರಳಿಸಿರುವ ವಸ್ತ್ರ ಧರಿಸಬಾರದೆಂದು ಮಾನ್ಯ ಹೈಕೋರ್ಟ್ ಮದ್ಯಂತರ ಆದೇಶ ಹೊರಡಿಸಿದೆ.

ಆದರೂ ದೇವನಹಳ್ಳಿ ತಾಲೂಕು ವಿಜಯಪುರ ಪಟ್ಟಣದ ಗುತ್ತಿಗೆ ಆಧಾರದ ಶಿಕ್ಷಕಿಯು ಹಿಜಾಬ್ ಧರಿಸಿಕೊಂಡು ಬಂದು ಶಾಲೆಯಲ್ಲಿ ಓಡಾಡಿದ್ದರು.

ಮಕ್ಕಳು ಹಿಜಾಬ್ ಇಲ್ಲದೆ ಶಾಲೆಗೆ ಬಂದ್ರೂ ಶಿಕ್ಷಕಿ ಮಾತ್ರ ಹಿಜಾಬ್ ಧರಿಸಿ‌ ಬಂದಿದ್ದರು. ಶಾಲೆಯ ಮುಖ್ಯ ಶಿಕ್ಷಕರೆ ಹಿಜಾಬ್ ತೆಗೆದು ಬಿಡಿ ಅಂತಲೇ ಹೇಳಿದರು ಶಿಕ್ಷಕಿ ತೆಗೆಯದೆ ಓಡಾಟ ನಡೆಸಿದ್ದರು.

ಹಿಜಾಬ್ ತೆಗೆಯದೇ ಉದ್ಧಟತನ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಹಿಜಾಬ್ ಧರಿಸಿದ್ದ ಶಿಕ್ಷಕಿಯನ್ನು ಮ್ಯಾನೇಜ್ಮೆಂಟ್ ಮನೆಗೆ ಕಳಿಸಿದೆ.ರಜೆಯ ಮೇಲೆ ಹಿಜಾಬ್ ಧರಿಸಿದ್ದ ಶಿಕ್ಷಕಿ ಮನೆಗೆ ವಾಪಸ್ ತೆರಳಿದ್ದಾರೆ.

ಕರಾವಳಿಗೆ ಮಾತ್ರ ಸೀಮಿತವಾಗಿದ್ದ ಹಿಜಾಬ್ ವಿವಾದ, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣ‌ಕ್ಕು ವಕ್ಕರಿಸಿರುವುದರ ಬಗ್ಗೆ ಸ್ಥಳೀಯರು ಅಸಮಾಧಾನಗೊಂಡಿದ್ದಾರೆ.

Edited By : Shivu K
PublicNext

PublicNext

14/02/2022 12:16 pm

Cinque Terre

38.03 K

Cinque Terre

37

ಸಂಬಂಧಿತ ಸುದ್ದಿ