ಬೆಂಗಳೂರು: ಅವರಿನ್ನೂ ಬಿಸಿ ರಕ್ತದ ಯುವಕರು. ಇಲಾಖೆಗೆ ಸೇರಿ ಏನಾನ್ನಾದರೂ ಸಾಧಿಸಲೇ ಬೇಕೆಂದು ಕನಸು ಕಂಡಿದ್ದ ತರುಣರು. ಇವರಿಗಿಂತ ಹೆಚ್ಚಾಗಿ ಮಕ್ಕಳ ಮೇಲೆ ಕುಟುಂಬಸ್ಥರು ನನ್ನ ಮಗ ಪೊಲೀಸ್ ಎಂದು ಹೆಮ್ಮೆಯಿಂದ ಎದೆ ಎತ್ತಿ ನಡೆಯುತ್ತಿದ್ದರು. ಆದರೆ ಅದೊಂದು ಅಪಘಾತ ಅವರ ಎದೆ ಮೂಳೆ ಮುರಿದಂತೆ ಮಾಡಿದೆ.
ಗಾಂಜಾ ಜಾಲವನ್ನ ಬೇಧಿಸಲು ತೆರಳಿದ್ದಾಗ ಕಾರು ಅಪಘಾತಕ್ಕೀಡಾದ ಪಿಎಸ್‌ಐ ಅವಿನಾಶ್ ಮತ್ತು ಕಾನ್‌ಸ್ಟೇಬಲ್ ಅನಿಲ್ ಸಾವನ್ನಪ್ಪಿದ್ದಾರೆ. ಕರ್ತವ್ಯನಿರತ ಪೊಲೀಸರ ಸಾವಿಗೆ ಇ.ಡಿ ಇಲಾಖೆ ಕಂಬನಿ ಮಿಡಿದಿದೆ. ಇಂದು ಬೆಂಗಳೂರಿನ ಕಮಿಷನರ್ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಸಂತಾಪ ಸೂಚಿಸಿ, ಪುಷ್ಪ ನಮನ ಸಲ್ಲಿಸಿದ್ದಾರೆ.
ಇನ್ನು ಇದೇ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಪಿಎಸ್‌ಐ ದೀಕ್ಷಿತ್ ಹಾಗೂ ವೆಲ್ಲೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾನ್ಸ್ಟೇಬಲ್ ಶರಣಪ್ಪ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು, ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಿಎಸ್‌ಐ ದೀಕ್ಷಿತ್ ಅವರನ್ನ ವೆಲ್ಲೂರಿನ ಆಸ್ಪತ್ರೆಯಿಂದ ನಿನ್ನೆ ತಡರಾತ್ರಿ ಬೆಂಗಳೂರಿನ ಹಾಸ್ಮ್ಯಾಟ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗ್ತಿದೆ. ಸದ್ಯ ಅಪಘಾತದಲ್ಲಿ ಪಿಎಸ್‌ಐ ದೀಕ್ಷಿತ್ ಬಲಗೈ ಮೂಳೆ ಮುರಿದಿದ್ದು ಇಂದು ಹಾಸ್ಮ್ಯಾಟ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಯ ಮೂಲಕ ಸರಿಪಡಿಸುವ ಚಿಕಿತ್ಸೆ ನೀಡಲಾಗಿದೆ. ಉಳಿದಂತೆ ಪಿಎಸ್‌ಐ ದೀಕ್ಷಿತ್ ಎದೆಯ ಎಡಭಾಗದ ಮೂಳೆ ಮುರಿದಿದ್ದು, ಲಂಗ್ಸ್ ಭಾಗಕ್ಕೂ ಗಂಭೀರ ರೀತಿಯ ಗಾಯಗಳಾಗಿವೆ. ಇನ್ನೂ ಮೂರು ದಿನಗಳ ಕಾಲ ದೀಕ್ಷಿತ್‌ರನ್ನ ಐಸಿಯುನಲ್ಲಿ ಇಟ್ಟು ಚಿಕಿತ್ಸೆ ನೀಡಲಿರುವ ವೈದ್ಯರು ನಂತರದಲ್ಲಿ ಹೊರರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಮುಂದುವರಿಸಲಿದ್ದಾರೆ. ಇನ್ನು ಗಂಭೀರವಾಗಿ ಗಾಯಗೊಂಡಿರುವ ಕಾನ್ಸ್‌ಟೇಬಲ್ ಶರಣಪ್ಪಗೆ ವೆಲ್ಲೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಒಂದು ಕಡೆ ನಿಷ್ಠಾವಂತ ಪೊಲೀಸರನ್ನ ಕಳದುಕೊಂಡ ನೋವಿನ ಜೊತೆಗೆ ಗಾಯಗೊಂಡ ಪೊಲೀಸರು ಆದಷ್ಟು ಬೇಗ ಚಡೆತರಿಸಿಕೊಳ್ಳಲಿ ಎನ್ನುವುದು ಪಬ್ಲಿಕ್ ನೆಕ್ಸ್ಟ್ ಆಶಯ.
ಶ್ರೀನಿವಾಸ್ ಚಂದ್ರ, ಕ್ರೈ ಬ್ಯೂರೋ ಪಬ್ಲಿಕ್ ನೆಕ್ಸ್ಟ್
PublicNext
26/07/2022 07:55 am