ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಶ್ವ ಪರಿಸರ ದಿನಾಚರಣೆ :ಕರ್ನಾಟಕ ರಾಜ್ಯ ಕಾನೂನು ಸಮಿತಿ ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ವೀರಪ್ಪ ಭಾಗಿ

ಬೆಂಗಳೂರು ದಕ್ಷಿಣ:ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಮಂಟಪ ಗ್ರಾಮ ಪಂಚಾಯಿತಿ,ಮತ್ತು ಯುತ್ ಫಾರ್ ಲೇಕ್ ಪ್ರೊಟಕ್ಷನ್ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಸರಳವಾಗಿ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.

ಇಲ್ಲಿನ ಮಂಟಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಷ್ಮೀಪುರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯ ಗೌರವಾನ್ವಿತ ನ್ಯಾಯಮೂರ್ತಿಗಳು ಮತ್ತು ಕರ್ನಾಟಕ ರಾಜ್ಯ ಕಾನೂನು ಸಮಿತಿ ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ವೀರಪ್ಪ ಉದ್ಘಾಟಿಸಿದರು.

ಇನ್ನು ಕಾರ್ಯಕ್ರಮದಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ವೀರಪ್ಪ ಮಾತನಾಡಿ ಪರಿಸರದ ಉಳವಿನಿಂದ ಮಾತ್ರ ಮಾನವ ಸಂಕುಲ ಹಾಗೂ ಪ್ರಾಣಿ ಪಕ್ಷಿಗಳು ಉಳಿಯಲು ಸಾಧ್ಯ .. ಪ್ರತಿಯೊಂದು ವ್ಯಕ್ತಿಯೂ ಒಂದೊಂದು ಗಿಡವನ್ನು ನೆಟ್ಟು ಅದನ್ನು ಸಂರಕ್ಷಣೆ ಮಾಡಿದರೆ ಇಡೀ ಗ್ರಾಮ ಹಚ್ಚ ಹಸಿರಿನಿಂದ ಕೂಡಿರುತ್ತದೆ ಅಂತ ತಿಳಿಸಿದರು.

ಇನ್ನು ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸತ್ರ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಸುಬ್ರಮಣ್ಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಸಂದೀಪ್ ಸಾಲಿಯಾನ್ ಜಿಲ್ಲಾಧಿಕಾರಿ ಜೆ ಮಂಜುನಾಥ ಆನೇಕಲ್ನ ಅಧ್ಯಕ್ಷರಾದ ಜಗದೀಶ್ ಗಣ್ಯಾತಿಗಣ್ಯರು ಭಾಗಿಯಾಗಿದ್ದರು.

Edited By : PublicNext Desk
Kshetra Samachara

Kshetra Samachara

07/06/2022 08:16 pm

Cinque Terre

1.31 K

Cinque Terre

0

ಸಂಬಂಧಿತ ಸುದ್ದಿ