ಬೆಂಗಳೂರು. ಮೂರನೇ ಅಲೆ ಕೊರೊನ ಹಿನ್ನೆಲೆ ಇಂದಿನಿಂದ ವೀಕ್ ಎಂಡ್ ಲಾಕ್ ಡೌನ್ ಅನಿವಾರ್ಯತೆ ಸೃಷ್ಠಿಯಾಗಿದೆ.ಈ ಹಿನ್ನೆಲೆ ನಗರಾದ್ಯಂತ ಪೊಲೀಸ್ರು ಮುಂಜಾನೆಯಿಂದ ಬಂದೋಬಸ್ತ್ ನಲ್ಲಿ ತೊಡಗಿದ್ದಾರೆ. ಇನ್ನು ಇದೇ ವೇಳೆ ಪೊಲೀಸ್ರ ಕಾರ್ಯವೈಖರಿ ಹಾಗೂ ಲಾಕ್ ಡೌನ್ ವೀಕ್ಷಿಸಲು ಕುದ್ದು ಗೃಹ ಮಂತ್ರಿ ಅರಗಜ್ಙಾನೇಂದ್ರ ಫೀಲ್ಡಿಗಿಳಿದಿದ್ರು.ಗೃಹಸಚಿವರಿಗೆ ಕಮಿಷನರ್ ಕಮಲ್ ಪಂಥ್, ಹೆಚ್ಚುವರಿ ಆಯಕ್ತ ಸಂದೀಪ್ ಪಾಟೀಲ್ ಸಾಥ್ ನೀಡಿದ್ರು. ಟೌನ್ ಹಾಲ್, ಅನುಕುಂಬ್ಳೆ ಸರ್ಕಲ್ ಸೇರಿ ಕೆಲವು ಆಯಕಟ್ಟಿನ ಸ್ಥಳದಲ್ಲಿ ಗೃಹಸಚಿವ ಪರಿಶೀಲನೆ ನಡೆಸಿದ್ರು. ಇನ್ನು ಇದೇ ವೇಳಡ ಮಾತನಾಡಿದ ಸಚಿವರು, ವೀಕ್ ಎಂಡ್ ಕರ್ಫ್ಯೂ ಹೇಗಿದೆ ಅಂತ ನೊಡೋಕೆ ಬಂದೆ,ಪೊಲೀಸರು 24×7 ಕೆಲಸ ಮಾಡ್ತಾರೆ ಅವರಿಗೆ ಆತ್ಮ ಸ್ಥೈರ್ಯ ತುಂಬಲು ಬಂದಿದ್ದೇನೆ. ಮುಂಜಾನೆಯಿಂದ ಇಲ್ಲಿವರೆಗೂ 1100 ವಾಹನಗಳು ಸೀಜ್ ಆಗಿದೆ, 200ಕ್ಕೂ ಅಧಿಕ ಚೆಕ್ ಪೋಸ್ಟ್ ನಿರ್ಮಾಣವಾಗಿದೆ.ನಿನ್ನೆ 8 ಸಾವಿರ ಕೇಸ್ ಗಳು ಆಗಿದೆಇವತ್ತು ಇನ್ನಷ್ಟು ಕೇಸ್ ಗಳು ಜಾಸ್ತಿ ಆಗೋ ಸಾಧ್ಯತೆ ಇದೆ ಎಂದ್ರೂ.. ಇನ್ನೂ ಯಶವಂತ ಸರ್ಕಲ್ ನಲ್ಲಿ ಸಚಿವರೇ ಸುಖಾಸುಮ್ಮನೆ ಹೊರಗೆ ಬರ್ಬಾರ್ದು ಎಂದು ವಾರ್ನ್ ಕೂಡ ಮಾಡಿದ್ರು..
ಇನ್ನೂ ಇದೇ ವೇಳೆ ಮೇಕೆದಾಟು ವಿಚಾರವಾಗಿ ಮಾತನಾಡಿದ ಸಚಿವರು ಪಾದಯಾತ್ರೆ ಬೆಂಗಳೂರಿನಲ್ಲಿ ಇಲ್ಲ,ಪಾದಯಾತ್ರೆ ಮುಂದೆ ಹಾಕ್ಕೊಳ್ಳಿ ಅಂತ ಮನವಿ ಮಾಡ್ತೀವಿ ಮಾಡಿದ್ದೇವೆ.ಪ್ರತಿಭಟನೆ ಮಾಡಲು ಎಲ್ಲರಿಗೂ ಅವಕಾಶ ಇದೆಆದ್ರೆ ಈ ಟೈಂನಲ್ಲಿ ಇದು ಸೂಕ್ರವಲ್ಲ ಎಂದು ಅಭಿಪ್ರಾಯ ಪಟ್ರು. ಪಂಚರಾಜ್ಯಗಳ ಚುನಾವಣೆ ಕುರಿತು ಹೇಳಿಕೆ ನೀಡಿದ ಸಚುವರು ಕೋವಿಡ್ ನಡುವೆ ಚುನಾವಣೆ ನಡೆಸೋ ಅನಿವಾರ್ಯ ಅಂತ ಆಯೋಗ ನಿರ್ಧಾರ ಮಾಡಿದೆ.
ಯಾವುದೇ ರ್ಯಾಲಿಗಳಿಗೂ ಅವಕಾಶ ಇಲ್ಲ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚುನಾವಣೆ ಮಾಡುವಂತದ್ದು ಅನಿವಾರ್ಯ.ಮನೆ ಮನೆಗೆ ಹೋಗಿ 5 ಜನರು ಮತಯಾಚನೆ ಮಾಡಬಹುದು ಎಂದು ಹೇಳಿದ್ರು
Kshetra Samachara
08/01/2022 11:11 pm