ಯಲಹಂಕ: ಬಿಕೋ ಎನ್ನುತ್ತಿರುವ ನಗರದ ಪ್ರಮುಖ ಹೆದ್ದಾರಿ, ಫ್ಲೈಓವರ್ ಗಳು... ನೆನ್ನೆ ರಾತ್ರಿಯಿಂದಲೇ ಪೊಲೀಸರು ನೈಟ್ - ವೀಕೆಂಡ್ ಕರ್ಫ್ಯೂ ಗೆ ಸಿದ್ಧತೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ನೆನ್ನೆ ರಾತ್ರಿ ಊರುಗಳತ್ತ ಜನ ಮುಖ ಮಾಡಿದ್ದರ ಪರಿಣಾಮ ಕಿ.ಮೀ. ವರೆಗೂ ಟ್ರಾಫಿಕ್ ಜಾಮ್ ಆಗಿತ್ತು. ಬೆಳಗ್ಗೆ ಕೆ.ಆರ್. ಮಾರುಕಟ್ಟೆ ಸುತ್ತಮುತ್ತ ಬೇಕಾಬಿಟ್ಟಿ ಸಂಚಾರಿಗಳ ವಾಹನ ಸೀಜ್ ಮಾಡಲಾಗಿತ್ತು. ಜೊತೆಗೆ ಬಿಬಿಎಂಪಿ ಸಿಬ್ಬಂದಿಯೊಂದಿಗೆ ಕೋವಿಡ್ ಟೆಸ್ಟ್ ವಿಧಿಸಿದ್ದರು. ಇದರಿಂದ ಪೊಲೀಸರು ಸಾವಿರಾರು ವಾಹನ ಸೀಜ್ ಮಾಡಿದ್ದಾರೆ.
ದೇವನಹಳ್ಳಿ ಏರ್ ಪೋರ್ಟ್ ಫ್ಲೈಒವರ್ ಬಿಟ್ಟು, ಎಲ್ಲ ಫ್ಲೈಓವರ್ ಗಳು ಬಂದ್ ಆಗಿತ್ತು. ಸಂಜೆ 7ರ ವರೆಗೂ ಎಲ್ಲ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿತ್ತು. ಇದರಿಂದ ವೀಕೆಂಡ್ ಕರ್ಫ್ಯೂ ಶೇ.90 ಯಶಸ್ಸು ಕಂಡಿದೆ ಅಂತಾರೆ ಜನ.
ಬೆಂಗಳೂರಿನ ಹೆಬ್ಬಾಳ, ಹೆಣ್ಣೂರು, ಕೆ.ಆರ್.ಪುರ, ಮಾರತ್ತಹಳ್ಳಿ, ಸಿಲ್ಕ್ಬೋರ್ಡ್ ರಸ್ತೆ ನಿರ್ಜನವಾಗಿತ್ತು. ಹೆಬ್ಬಾಳ ದೇವನಹಳ್ಳಿ ಏರ್ ಪೋರ್ಟ್ ರಸ್ತೆದೂ ಅದೇ ಸ್ಥಿತಿ. ತುಮಕೂರು- ಪುಣೆ ರಾ.ಹೆ.ಯಲ್ಲೂ ಶೇ. 10ರಿಂದ 15ರಷ್ಟು ಎಮರ್ಜೆನ್ಸಿ ವಾಹನ ಸಂಚಾರವಿತ್ತು. ಮೈಸೂರು ರಸ್ತೆಯಲ್ಲಿ ಶೇ. 20ರಷ್ಟು ವಾಹನ ಸಂಚಾರವಿತ್ತು. ಬಿಎಂಟಿಸಿ ಬಸ್ , ಟ್ಯಾಕ್ಸಿ, ಫುಡ್ ಡೆಲಿವರಿ ಬೈಕ್ಸ್, ಆಟೋ ಸಹಿತ ಎಮರ್ಜೆನ್ಸಿ ಸೇವೆ ಮುಂದುವರಿದಿತ್ತು. ಪ್ರಯಾಣಿಕರಿಲ್ಲದೆ ಬಿಎಂಟಿಸಿ & ಆಟೋ ಖಾಲಿ ಖಾಲಿಯಾಗಿದ್ದವು.
"ಕೊರೊನಾ ಲಾಕ್ ಡೌನ್, ನೈಟ್- ವೀಕೆಂಡ್ ಕರ್ಫ್ಯೂಗಳಿಂದ ಏನೂ ಪ್ರಯೋಜನವಿಲ್ಲ. ಇದರಿಂದ ಕೊರೊನಾ- ಒಮಿಕ್ರಾನ್ ನಿಯಂತ್ರಣ ಕಷ್ಟ. ಹೇಗಾದರೂ ರಾಜ್ಯಗಳ ಗಡಿ ಬಂದ್ ಮಾಡಬೇಕು. ಇನ್ನೂ ಸಾಧ್ಯವಾದರೆ ವಿದೇಶಿ ವಿಮಾನ ಹಾರಾಟವನ್ನೇ ರದ್ದು ಮಾಡಬೇಕು" ಎಂಬ ಜನರ ಕೂಗು ಸರ್ಕಾರಕ್ಕೆ ಕೇಳುತ್ತಾ!?
PublicNext
08/01/2022 10:52 pm