ಯಲಹಂಕ: ಕೊರೊನಾ ಹೆಮ್ಮಾರಿಯ ಆರ್ಭಟ ರಾಜ್ಯದೆಲ್ಲೆಡೆ ದಿನೇ ದಿನೆ ಹೆಚ್ಚಾಗುತ್ತಲೇ ಇದೆ! ಕೊರೊನಾ-ಒಮಿಕ್ರಾನ್ ಆತಂಕ ಮಕರ ಸಂಕ್ರಾಂತಿ ಹಬ್ಬದ ಮೇಲೂ ಪ್ರಭಾವ ಬೀರಿದೆ. ಶೇ. 30ರಷ್ಟು ಜನರು ಮಾತ್ರ ಹಬ್ಬದ ಸಂಭ್ರಮದಲ್ಲಿ ತೊಡಗಿದ್ದಾರೆ ಎಂದರೆ ತಪ್ಪಾಗಲಾರದು.
ಒಂದೆಡೆ ಕೊರೊನಾತಂಕ, ಮತ್ತೊಂದೆಡೆ ಮಕರ ಸಂಕ್ರಾಂತಿ ಸಂಭ್ರಮ. ಈ ನಡುವೆ ವೀಕೆಂಡ್ ಕರ್ಫ್ಯೂ! ಇವೆಲ್ಲವುಗಳಿಂದ ಯಲಹಂಕದ ಜನತೆ ಬೇಸತ್ತು ಹೋಗಿದ್ದಾರೆ. ಆದರೂ ಹಬ್ಬದ ಆಚರಣೆ ಕಡಿಮೆಯಾಗಿಲ್ಲ. ಯಲಹಂಕದ ಕೆಂಪೇಗೌಡ ಸರ್ಕಲ್ ಮತ್ತು ರೈತರ ಸಂತೆ ಸರ್ಕಲ್ ಹಾಗೂ ಏರ್ ಪೋರ್ಟ್ ರಸ್ತೆ- ಫ್ಲೈಓವರ್ ರಸ್ತೆಗಳಲ್ಲಿ ಜನ ಸಹಿತ ವಾಹನ ಸಂದಣಿಯಿತ್ತು. ಆದರೆ, ಕೊರೊನಾ ಭಯದೊಂದಿದೆ ಸರ್ಕಾರದ ವೀಕೆಂಡ್ ಕರ್ಫ್ಯೂ ʼಮಕರ ಸಂಕ್ರಾಂತಿʼ ಖುಷಿ- ಸಂಭ್ರಮವನ್ನೇ ಕಸಿದಿದೆ.
Kshetra Samachara
15/01/2022 11:52 am