ಬೆಂಗಳೂರು: ವೇಗವಾಗಿ ಬಂದ ಕಾರು ಬೈಕ್ ಸವಾರನಿಗೆ ಡಿಕ್ಕಿಯಾಗಿರುವ ಘಟನೆ ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯ ಮಣಿಪಾಲ್ ಆಸ್ಪತ್ರೆ ಬಳಿ ನಡೆದಿದೆ.
ಬೈಕ್‌ನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯವಾಗಿದ್ದು ಘಟನೆಯಲ್ಲಿ ಬೈಕ್ ನುಜ್ಜುಗುಜ್ಜಾಗಿದೆ. ಮಾಜಿ ಕಾರ್ಪರೇಟರ್ ಅಬ್ದುಲ್ ವಾಜೀದ್ ಒಡೆತನದ ಐಟ್ವೆಂಟಿ ಕಾರಿನಿಂದ ಡಿಕ್ಕಿಯಾಗಿದ್ದು, ಸ್ಥಳಕ್ಕೆ ಹೈಗ್ರೌಂಡ್ ಸಂಚಾರಿ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಅದೃಷ್ಟವಶಾತ್ ಗಾಯಾಳು ಬೈಕ್ ಸವಾರರಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದು, ಅಬ್ದುಲ್ ವಾಜೀದ್ ಪುತ್ರ ಯಾಯಿದ್ ಅತೀ ವೇಗವಾಗಿ ಕಾರು ಚಲಾಯಿಸುತ್ತಿದ್ದ ಎಂದು ತಿಳಿದುಬಂದಿದೆ.
ಗಾಯಾಳುಗಳಾದ ಯಶವಂತ ಹಾಗೂ ನಿಖಿತಾರನ್ನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಜಯನಗರದಿಂದ ವಸಂತನಗರದ ಸಂಬಂಧಿಕರ ಮನೆಗೆ ತೆರಳುತ್ತಿದ್ದಾಗ ಅಪಘಾತ ನಡೆದಿದೆ. ಗಾಯಾಳು ಯಶವಂತ್ ಕಾಲಿನ ಮೂಳೆ ಮುರಿದಿದ್ರೆ, ಬೈಕ್ ಹಿಂಬದಿಯಿದ್ದ ನಿಖಿತಾ ಕಾಲಿಗೆ ಗಾಯವಾಗಿದೆ. ಹೈಗ್ರೌಂಡ್ಸ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
PublicNext
21/08/2022 06:40 pm