ಬೆಂಗಳೂರು: ಈ ರಸ್ತೆಯ ಮೇಲೆ ನೀವು ಗಾಡಿ ಓಡಿಸುವಾಗ ಸ್ವಲ್ಪ ಯಾಮಾರಿದರೆ ನಿಮ್ಮ ಕೈ ಕಾಲಿನ ಮೂಳೆ ಮುರಿದು ಕೊಳ್ಳಬೇಕು, ನಿಮ್ಮ ಟೈಮ್ ಇನ್ನೂ ಕೆಟ್ಟದಾಗಿದ್ದರೆ ಸಾವಿಗೂ ಆಹ್ವಾನ!.
ಯಾಕೆಂದರೆ ಬೆಂಗಳೂರಿನ ಮುಖ್ಯರಸ್ತೆಗಳ ಪರಿಸ್ಥಿತಿ ಹೀಗಿದೆ. ಅದರಲ್ಲೂ ಬನ್ನೇರುಘಟ್ಟ ರಸ್ತೆಯಲ್ಲಿರುವ ಜಲಭವನ್ ಮುಂಭಾಗ ಇರುವ ರಸ್ತೆ ಸಂಪೂರ್ಣ ಗುಂಡಿಗಳಿಂದ ತುಂಬಿವೆ. ದಿನನಿತ್ಯ ಓಡಾಡುವ ದ್ವಿಚಕ್ರವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಇದಕ್ಕೆಲ್ಲ ಕಾರಣವಾಗಿದ್ದು ಬಿಡಬ್ಲ್ಯೂಎಸ್ಎಸ್ಬಿ ಕಾಮಗಾರಿ ಮಾಡಿ ರಸ್ತೆಯನ್ನು ಗುಂಡಿಮಯ ಮಾಡಿಬಿಟ್ಟಿದ್ದಾರೆ. ಮೊದಲೇ ಮೆಟ್ರೋ ಕಾಮಗಾರಿಯಿಂದ ಚಿಕ್ಕದಾಗಿರುವ ರಸ್ತೆ. ಈಗ ದಿನನಿತ್ಯ ವಾಹನ ಸವಾರರು ಇದೇ ಮುಖ್ಯರಸ್ತೆಯಲ್ಲಿ ಪರದಾಡುತ್ತಾ ಸಾಗುವ ಸ್ಥಿತಿ ನಿರ್ಮಾಣಗೊಂಡಿದೆ.
PublicNext
02/08/2022 11:00 pm