Exclusive
ಬೆಂಗಳೂರು: ಒಂದು ತಿಂಗಳ ಹಿಂದಷ್ಟೇ ವಿಶೇಷ ವರದಿಯೊಂದರಲ್ಲಿ ಕೆಂಗೇರಿ- ಮೈಸೂರು ರಸ್ತೆಯ ದುಸ್ಥಿತಿ ಬಗ್ಗೆ ʼಪಬ್ಲಿಕ್ ನೆಕ್ಸ್ಟ್ʼ ಎಚ್ಚರಿಸಿತ್ತು. ಎಸ್, ಈ ರಸ್ತೆ ಕುಸಿಯುತ್ತೆ ಅಂತ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿತ್ತು. ಆದ್ರೆ, ಅಧಿಕಾರಿಗಳು ಎಚ್ಚೆತ್ತುಕೊಳ್ಳದ ಕಾರಣ ಇವತ್ತು ರಸ್ತೆ ಸಂಪೂರ್ಣ ಕುಸಿದಿದೆ!
ಈ ಪಕ್ಕದಲ್ಲಿರುವ ಈ ರಸ್ತೆ ಎರಡು ವರ್ಷಗಳ ಹಿಂದೆ ಸಂಪೂರ್ಣ ಮೋರಿಯ ತಡೆಗೋಡೆ ರಸ್ತೆಗೆ ಕುಸಿದಿತ್ತು. ನಂತರ ಎರಡು ವರ್ಷಗಳ ನಂತರ ರೆಡಿ ಮಾಡ್ತಾರೆ. ಸವಾರರು ನಿಟ್ಟುಸಿರು ಬಿಡುವಷ್ಟರಲ್ಲಿ ಪಕ್ಕದ ರಸ್ತೆ ಕುಸಿದಿದೆ. ಈ ರಸ್ತೆ ಇಲ್ಲದ ಕಾರಣ ವಾಹನ ಸವಾರರು ಸುತ್ತಾಕಿಕೊಂಡು ಬರುವ ಸ್ಥಿತಿ ಕ್ರಿಯೇಟ್ ಆಗಿದೆ.
ಇಲ್ಲಿ ಬಿಡಿಎ ಕಾಂಪ್ಲೆಕ್ಸ್ ಗಳು ಇವೆ. ರೈಲ್ವೆ ಸ್ಟೇಷನ್ ಗೆ ಹೋಗುವ ದಾರಿ ಇದೆ. ಇಲ್ಲಿಗೆಲ್ಲ ಹೋಗಬೇಕು ಅಂದ್ರೆ 10 km ಸುತ್ತಾಕಿಕೊಂಡು ಬರಬೇಕು. ಇದು ಅಧಿಕಾರಿಗಳ ನಿರ್ಲಕ್ಷ್ಯವಲ್ಲದೆ ಬೇರೇನು ಅಂತಾರೆ. ಒಟ್ಟಿನಲ್ಲಿ ಈ ರಸ್ತೆ ಮಾಡೋದಕ್ಕೆ ಇನ್ನೆಷ್ಟು ಟೈಂ ತೆಗೆದುಕೊಳ್ತಾರೋ ಗೊತ್ತಿಲ್ಲ. ಈ ಬಗ್ಗೆ ಒಂದು ವಾಕ್ ಥ್ರೂ...
PublicNext
10/06/2022 09:27 pm