ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ತೆರಿಗೆ ವಂಚಿತರ ಮೇಲೆ ಡ್ರೋನ್ ಕಣ್ಣು

ವರದಿ- ಗಣೇಶ್ ಹೆಗಡೆ

ಬೆಂಗಳೂರು : ಬಿಬಿಎಂಪಿ ವ್ಯಾಪ್ತಿ ಯಲ್ಲಿ ಇರುವ ಎಲ್ಲಾ ಸ್ವತ್ತುಗಳನ್ನು ಸಮರ್ಪಕವಾಗಿ ತೆರಿಗೆ ಸಂಗ್ರಹಿಸುವ ಸಲುವಾಗಿ ಡ್ರೋನ್ ಬಳಕೆಗೆ ಬಿಬಿಎಂಪಿ ಮುಂದಾಗಿದೆ.

ಪ್ರಾಯೋಗಿಕವಾಗಿ ಡ್ರೋನ್ ಬಳಸಿ ಆಸ್ತಿ ಸರ್ವೇ ಕಾರ್ಯ ನಡೆಸಲಾ ಗುತ್ತದೆ. ಸದ್ಯ ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಆಸ್ತಿಗಳ ಸಮೀಕ್ಷೆ ನಡೆಸಲಾಗುತ್ತಿದೆ.

ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆಯಲ್ಲಿ ಸುಮಾರು 2. ಕಿ.ಮೀ ವ್ಯಾಪ್ತಿಯಲ್ಲಿನ ಆಸ್ತಿಗಳನ್ನು ಡ್ರೋನ್ ಮೂಲಕ ಸರ್ವೇ ನಡೆಸಲಾಗುತ್ತದೆ. ಅನಂತರ ಕಂದಾಯ ಅಧಿಕಾರಿಗಳು ಭೌತಿಕವಾಗಿ ಪರಿಶೀಲನೆ ನಡೆಸಿ ತೆರಿಗೆ ವ್ಯಾಪ್ತಿಗೆ ಬಾರದ ಹಾಗೂ ತೆರಿಗೆ ವಂಚಿಸುತ್ತಿರುವ ಕಟ್ಟಡಗಳನ್ನು ಗುರುತಿಸಲಿದ್ದಾರೆ. ಇದರ ಯಶಸ್ಸು ಆಧರಿಸಿ ಉಳಿದ ಕಡೆಯಲ್ಲಿ ಡ್ರೋನ್ ಸರ್ವೇ ಕೈಗೊಳ್ಳಲು ಪಾಲಿಕೆ ನಿರ್ಧರಿಸಿದೆ.

Edited By :
PublicNext

PublicNext

04/06/2022 09:46 am

Cinque Terre

38.81 K

Cinque Terre

0

ಸಂಬಂಧಿತ ಸುದ್ದಿ