ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಗ್ಯಾಸ್, ಪೆಟ್ರೋಲ್, ಡಿಸೇಲ್ ಆಯ್ತು, ಈಗ ಕರೆಂಟ್ ಶಾಕ್: ಬೆಲೆ ಏರಿಕೆಯಿಂದ ಜನ ಕಂಗಾಲು

ಬೆಂಗಳೂರು: ಪೆಟ್ರೋಲ್, ಗ್ಯಾಸ್ ಮತ್ತು ಆಹಾರ ಪದಾರ್ಥಗಳಂತಹ ಇತರ ಅಗತ್ಯ ವಸ್ತುಗಳ ಬೆಲೆಗಳ ತೀವ್ರ ಏರಿಕೆಯಿಂದ ನರಳುತ್ತಿದ್ದ ಜನಸಾಮಾನ್ಯರಿಗೆ ಸರ್ಕಾರ ಈಗ ವಿದ್ಯುತ್ ಶಾಕ್ ಕೊಟ್ಟಿದೆ.

ಹೌದು ಪ್ರತಿ ಯೂನಿಟ್ ವಿದ್ಯುತ್‌ಗೆ 35 ಪೈಸೆ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದ ಬಳಿಕ ಜನಸಾಮಾನ್ಯರ ಬದುಕು ಮತ್ತಷ್ಟು ದುಸ್ತರವಾಗಿದೆ.

ಸದ್ಯ ಕರೆಂಟ್ ಬಿಲ್ ಹೆಚ್ಚಳದ ಬಗ್ಗೆ ಜನ ಸಾಮಾನ್ಯರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಲೇ ದಿನಗಳೆಯುಂತಾಗಿದೆ. ಸದ್ಯ ಬೆಲೆ ಏರಿಕೆಯ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಹೀಗಿದೆ ನೋಡಿ.

ಕೋವಿಡ್ ಬಳಿಕ ಈಗಷ್ಟೆ ಸುಧಾರಿಸಿಕೊಳ್ಳುತ್ತಿರುವ ಜನರಿಗೆ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ನಮ್ಮನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುತ್ತಿದೆ ಶೀಘ್ರ ಅಗತ್ಯವಸ್ತುಗಳ ಬೆಲೆ ಕಡಿಮೆ ಮಾಡುವಂತೆ ಸಾರ್ವಜನಿಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ನವೀನ್, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು.

Edited By : Nagesh Gaonkar
PublicNext

PublicNext

06/04/2022 12:01 pm

Cinque Terre

41.51 K

Cinque Terre

3

ಸಂಬಂಧಿತ ಸುದ್ದಿ