ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅಂಗನವಾಡಿ ನೌಕರರಿಂದ ಮುಂದುವರೆದ ಪ್ರೊಟೆಸ್ಟ್

ಬೆಂಗಳೂರು: ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ 'ವಿಧಾನಸೌಧ ಚಲೋ...' ಮುಂದುವರೆಸಿದೆ. ಅಂಗನವಾಡಿ ಕೇಂದ್ರಗಳನ್ನು ಅನಿರ್ದಿಷ್ಟ ಬಂದ್ ಮಾಡಿ ಫ್ರೀಡಂ ಪಾರ್ಕ್ ನಲ್ಲಿ ಪ್ರೊಟೆಸ್ಟ್ ಮಾಡಲಾಗುತ್ತಿದೆ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸುಮಾರು 2 ಸಾವಿರ ಅಂಗನವಾಡಿ ಕಾರ್ಯಕರ್ತರು ಹೋರಾಟ ಮಾಡುತ್ತಿದ್ದಾರೆ. ಬಜೆಟ್​ನಲ್ಲಿ ಸಿಎಂ ಬೊಮ್ಮಾಯಿ 1000 ರೂ. ಹೆಚ್ಚಿಸಿದರೂ ನೌಕರರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. 20 ವರ್ಷ ಮೇಲ್ಪಟ್ಟು ಕೆಲಸ ಮಾಡಿದವರಿಗೆ 2 ಸಾವಿರ ಹೆಚ್ಚಳ ಮಾಡಬೇಕು. 10 ವರ್ಷ ಮೇಲ್ಪಟ್ಟು ಕೆಲಸ ಮಾಡಿದವರಿಗೆ 1500 ರೂ. ಹೆಚ್ಚಳ ಮಾಡಬೇಕು.

ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ನಡೆಸಬೇಕು. ಎನ್. ಇ.ಪಿ. ಶಿಫಾರಸ್ಸುಗಳನ್ನು ಜಾರಿ ಮಾಡಬಾರದು ಎಂದು ಪ್ರತಿಭಟಿಸಲಾಗುತ್ತಿದೆ ಎಂದು ಎ.ಐ.ಟಿ.ಯು.ಸಿ. ರಾಜ್ಯ ಕಾರ್ಯದರ್ಶಿ ಶಾಂತಾ ತಿಳಿಸಿದ್ದಾರೆ.

ಇಲಾಖೆಯ ಶಿಫಾರಸ್ಸಿನಂತೆ 339.48 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು. ಅಂಗನವಾಡಿ ನೌಕರರ ಕೇಂದ್ರಗಳ ಮೇಲ್ವಿಚಾರಣೆ ಗ್ರಾಮ ಪಂಚಾಯ್ತಿಗಳಿಗೆ ಕೊಡಬಾರದು. ನಿವೃತ್ತಿಯಾದ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಜೀವನ ನಡೆಸಲು ಪೆನ್ಶನ್ ಜಾರಿ ಮಾಡಬೇಕು. ಮಿನಿ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಆಗ್ರಹಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

05/03/2022 06:12 pm

Cinque Terre

2.53 K

Cinque Terre

0

ಸಂಬಂಧಿತ ಸುದ್ದಿ