ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಸದ ರಾಶಿಗೆ ಬೆಂಕಿ,ಊರೆಲ್ಲಾ ಹೊಗೆ

ಆನೇಕಲ್ : ಕಲ್ಲು ಕ್ವಾರಿಯ ಕಸದ ರಾಶಿಯಲ್ಲಿ ದೊಡ್ಡಮಟ್ಟದಲ್ಲಿ ಬೆಂಕಿ ಕಾಣಿಸಿಕೊಂಡು ಇಡೀ ಗ್ರಾಮದಲ್ಲಿ ದಟ್ಟ ಹೊಗೆ ಆವರಿಸಿದೆ. ಬೆಂಗಳೂರಿನ ದಕ್ಷಿಣ ಕ್ಷೇತ್ರದ ದೊಡ್ಡತೋಗೂರು ಭಾಗದಲ್ಲಿ ಎರಡು ದಿನಗಳಿಂದ ಈ ಅವಂತರ ಸೃಷ್ಟಿಯಾಗಿದೆ .

ಕಳೆದ ಐದು ವರ್ಷಗಳ ಹಿಂದೆ ಈ ಕ್ವಾರಿಯಲ್ಲಿ ಕೆಲಸ ನಡೆಯುತ್ತಿತ್ತು , ಇದರಿಂದ ನೂರಾರು ಅಡಿಗಳಷ್ಟು ಆಳವಾಗಿ ಈ ಕ್ವಾರಿ ನಿರ್ಮಾಣವಾಗಿದೆ. ಇದೀಗ ಕೆಲಸ ನಿಂತು ಹೋಗಿದ್ದು, ಇದರಿಂದ ಬೆಂಗಳೂರು, ಆನೇಕಲ್, ಚಂದಾಪುರ ಪುರಸಭೆ, ಹೆಬ್ಬಗೋಡಿ ನಗರಸಭೆ ಮತ್ತು ಜಿಗಣಿ ಪುರಸಭೆ ಹೀಗೆ ಅನೇಕ ಕಡೆಗಳಿಂದ ಸದ ರಾಶಿಯನ್ನು ತಂದು ಇಲ್ಲಿ ಡಂಪ್ ಮಾಡಲಾಗುತ್ತಿದೆ.

ಇದರಿಂದ ಕಳೆದ ಎರಡು ದಿನಗಳ ಹಿಂದೆ ಕೆಲ ಕಿಡಿಗೇಡಿಗಳು ಕಸದ ರಾಶಿಗೆ ಬೆಂಕಿ ಹಚ್ಚಿದ್ದಾರೆ. ಇದು ದೊಡ್ಡ ಮಟ್ಟದಲ್ಲಿ ವ್ಯಾಪಿಸಿದ್ದು, ಕಳೆದ ಎರಡು ದಿನಗಳಿಂದ ಬೆಂಕಿ ಉರಿಯುತ್ತಲೇ ಇದೆ. ಅಗ್ನಿಶಾಮಕ ಸಿಬ್ಬಂದಿಗಳು ಸಹ ಬೆಂಕಿ ಆರಿಸಲು ಹರಸಾಹಸ ಪಡುತ್ತಿದ್ದಾರೆ.

ಸ್ಥಳಕ್ಕೆ ಬೆಂಗಳೂರು ದಕ್ಷಿಣ ತಾಲ್ಲೂಕಿನ ತಹಶೀಲ್ದಾರ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

Edited By : Nirmala Aralikatti
Kshetra Samachara

Kshetra Samachara

25/01/2022 04:12 pm

Cinque Terre

298

Cinque Terre

0

ಸಂಬಂಧಿತ ಸುದ್ದಿ