ಬೆಂಗಳೂರು - ಕೋವಿಡ್ ರೂಪಾಂತರಿ ವೈರಾಣು ಒಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವೀಕೆಂಡ್ ಕರ್ಪ್ಯೂ ಜಾರಿಗೆ ತಂದಿದೆ.
ಅದರೆ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾ ಗೋದಿಲ್ಲ. ಎಂದಿನಂತೆ ಬಸ್ ಗಳ ಸಂಚಾರ ನಡೆಯಲಿದೆ.
ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಜತೆ ಮಾತನಾಡಿದ ಕೆಎಸ್ಆರ್ ಟಿಸಿ ಎಂ.ಡಿ. ಶಿವಯೋಗಿ ಕಳಸದ್ ಗೋವಾ, ಕೇರಳ, ಮಹಾರಾಷ್ಟ್ರ, ಹಾಗೂ ತಮಿಳುನಾಡು ರಾಜ್ಯಗಳಿಗೆ ಬಸ್ ಸಂಚಾರ ಆಗಲಿದೆ. ಸರ್ಕಾರ ಹೇರಿರುವ ನಿಯಮದ ಪ್ರಕಾರವೇ ಬಸ್ ಸಂಚಾರದ ವ್ಯವಸ್ಥೆ ಆಗಲಿದೆ.
ಪ್ರಯಾಣಿಕರ ದಟ್ಟಣೆ ಅನುಗುಣವಾಗಿ ಬಸ್ ಸಂಚಾರದ ವ್ಯವಸ್ಥೆ ನಡೆಯಲಿದೆ ಎಂದು ಶಿವಯೋಗಿ ಕಳಸದ್ ತಿಳಿಸಿದ್ದಾರೆ.
Kshetra Samachara
05/01/2022 02:05 pm