ಬೆಂಗಳೂರು: ರಾಜಧಾನಿ ಪರ್ಯಾಯ ಸಾರಿಗೆ ಎಂದು ಕರೆಸಿಕೊಳ್ಳುವ ನಮ್ಮೆ ಮೆಟ್ರೋ ರೈಲು ಸಂಚಾರದಲ್ಲಿ ಆದಾಯ ಗಣನೀಯವಾಗಿ ಇಳಿಮುಖ ಕಂಡಿದೆ.
ಇದರ ಮೂಲಕ ನಿತ್ಯ 30 ಲಕ್ಷ ರೂ. ನಷ್ಟು ನಷ್ಟವನ್ನು ಅನುಭವಿಸುತ್ತಿದೆ. ಮೆಟ್ರೋ ನಿರ್ವಹಣೆಗೆ ನಿತ್ಯ 1 ಕೋಟಿ ಬೇಕಿದೆ. ಸದ್ಯ 70 ಲಕ್ಷ ರೂ . ಮಾತ್ರ ಸಂಗ್ರಹವಾಗ್ತಿದೆ. ಪರಿಣಾಮ ಉಳಿದ ಹಣದ ಟಾರ್ಗೇಟ್ ರೀಚ್ ಮಾಡಲು ಬಿಎಂಆರ್ ಸಿಎಲ್ ಪರದಾಟ ನಡೆಸುತ್ತಿದೆ.
ಕೋವಿಡ್ ನಂತರದ ಬಳಿಕ ಆದಾಯದಲ್ಲಿ ಸ್ವಲ್ಪ ಚೇತರಿಕೆ ನಮ್ಮ ಮೆಟ್ರೋ ಪ್ರಾಧಿಕಾರ ಕಂಡಿದೆ. ಅದರೆ ಒಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ರೈಲಿನತ್ತ ಪ್ರಯಾಣಿಕರು ಮುಖ ಮಾಡ್ತಿಲ್ಲ. ಪರಿಣಾಮ ಆರ್ಥಿಕ ಹೊರೆ ಅನುಭಿಸುತ್ತಿದೆ.
ಇನ್ನೂ ಮಾಸ್ಕ್ ಹಾಕದೆ ಕೊವೀಡ್ ನಿಯಮ ಮೆಟ್ರೋ ನಿಲ್ದಾಣಗಳಲ್ಲಿ ಉಲ್ಲಂಘನೆ ಮಾಡಿ ದಂಡ ವಸೂಲಿ ಮೊತ್ತ ಬರೋಬ್ಬರಿ 75 ಲಕ್ಷ ರೂ ಸಂಗ್ರಹವಾಗಿದೆ.
Kshetra Samachara
27/12/2021 01:49 pm