ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೊಡ್ಡಬಳ್ಳಾಪುರ: ಬಿಬಿಎಂಪಿ ತ್ಯಾಜ್ಯ ಘಟಕ ಮುಚ್ಚಲು ಡಿ.ಸಿ. ಜೊತೆಗಿನ ಸಂಧಾನ ವಿಫಲ; ಧರಣಿ ಮುಂದುವರಿಕೆ

ದೊಡ್ಡಬಳ್ಳಾಪುರ: ಬಿಬಿಎಂಪಿ ತ್ಯಾಜ್ಯ ಘಟಕ ಮುಚ್ಚುವಂತೆ ಒತ್ತಾಯಿಸಿ ಗ್ರಾಮಸ್ಥರು ಅನಿರ್ದಿಷ್ಟಾವಧಿ ಧರಣಿ ಮುಂದುವರಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಕೂಡ ವಿಫಲಗೊಂಡಿದ್ದು, ಘಟಕ ಬಾಗಿಲು ಮುಚ್ಚುವ ತನಕ ಧರಣಿಯಿಂದ ಹಿಂದೆ ಸರಿಯುವುದಿಲ್ಲವೆಂದು ಪಟ್ಟುಹಿಡಿದ್ದಾರೆ.

ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಘಟಕವನ್ನು ದೊಡ್ಡಬಳ್ಳಾಪುರ ತಾಲೂಕಿನ ಚಿಗೇರಹಳ್ಳಿಯಲ್ಲಿ ನಿರ್ಮಿಸಲಾಗಿದ್ದು, ಎಂಎಸ್ ಜಿಪಿ ಘಟಕ ಕಸ ಸಂಸ್ಕರಣೆ ಮಾಡುತ್ತಿದೆ. ಆದರೆ, ವೈಜ್ಞಾನಿಕವಾಗಿ ಕಸ ಸಂಸ್ಕರಣೆ ಮಾಡದೆ ಪರಿಸರದ ಗಾಳಿ, ನೀರು, ಮಣ್ಣನ್ನು ವಿಷಯುಕ್ತವಾಗಿಸಿ ಘಟಕದ ಸುತ್ತಮುತ್ತಲಿನ 30 ಕ್ಕೂ ಹೆಚ್ಚು ಗ್ರಾಮಗಳ ಜನರ ಬದುಕು ನರಕವಾಗುವಂತೆ ಮಾಡಿದ್ದಾರೆ. ಇದರ ವಿರುದ್ಧ ರೊಚ್ಚಿಗೆದ್ದಿರುವ ರೈತರು ಶಾಶ್ವತವಾಗಿ ಘಟಕವನ್ನು ಮುಚ್ಚುವಂತೆ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದರು.

ಇದರಿಂದ ಎಚ್ಚೆತ್ತ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ನೇತೃತ್ವದ ಅಧಿಕಾರಿಗಳ ತಂಡ ಸ್ಥಳಕ್ಕೆ ಆಗಮಿಸಿ ಜನರ ಸಮಸ್ಯೆ ಆಲಿಸಿದರು. ನಂತರ ಎಂಎಸ್ ಜಿಪಿ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಜಿಲ್ಲಾಧಿಕಾರಿಗೆ ಮನವಿ ಮಾಡಿದ ಪ್ರತಿಭಟನಾನಿರತರು ಶಾಶ್ವತವಾಗಿ ಘಟಕ ಮುಚ್ಚಬೇಕೆಂದು ಒತ್ತಾಯಿಸಿ, ತಮ್ಮ ಸಂಕಷ್ಟ ಅರುಹಿದರು.

ಈ ವೇಳೆ ಜಿಲ್ಲಾಧಿಕಾರಿ, ದೊಡ್ಡಬೆಳವಂಗಲ ಪೊಲೀಸ್ ಠಾಣೆಗೆ ಎಂಎಸ್ ಜಿಪಿ ಘಟಕದ ಮಾಲೀಕನನ್ನು ಕರೆಸಿ ಮಾತುಕತೆ ನಡೆಸಿ, ಜನರ ಬೇಡಿಕೆ ಈಡೇರಿಸುವಂತೆ ಸೂಚನೆ ನೀಡಿದರು. ನಂತರ ಧರಣಿ ನಿರತರ ಬಳಿಗೆ ಬಂದ ಜಿಲ್ಲಾಧಿಕಾರಿ, ನಿಮ್ಮ ಬೇಡಿಕೆ ಈಡೇರಿಸುವುದಾಗಿ ಆಶ್ವಾಸನೆ ನೀಡಿದರು. ಆದರೆ, ಎಂಎಸ್ ಜಿಪಿ ಘಟಕ ಶಾಶ್ವತವಾಗಿ ಬಾಗಿಲು ಹಾಕುವ ತನಕ ಧರಣಿಯಿಂದ ಹಿಂದೆ ಸರಿಯುವುದಿಲ್ಲವೆಂದು ಧರಣಿನಿರತರು ಪಟ್ಟು ಹಿಡಿದಿದ್ದಾರೆ.

Edited By : Manjunath H D
Kshetra Samachara

Kshetra Samachara

26/11/2021 11:50 am

Cinque Terre

512

Cinque Terre

0

ಸಂಬಂಧಿತ ಸುದ್ದಿ