ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ತಿರುಮಲಶೆಟ್ಟಿಹಳ್ಳಿ- ಚನ್ನಸಂದ್ರ ಸೇತುವೆ ಸಂಚಾರಕ್ಕೆ ಮಳೆನೀರು ಅಡ್ಡಿ; ಜನರ ಶಿಫ್ಟ್ ಗೆ ಟ್ರ್ಯಾಕ್ಟರ್‌ ನೆರವು

ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ತಿರುಮಲಶೆಟ್ಟಿಹಳ್ಳಿ- ಚನ್ನಸಂದ್ರ ಸೇತುವೆ ಕಳೆದ ಮೂರು ದಿನಗಳ ಹಿಂದೆ ತುಂಬಿ ಹರಿದಿತ್ತು. ದಕ್ಷಿಣ ಪಿನಾಕಿನಿ ನದಿ ಪಾತ್ರದ ಈ ಸೇತುವೆ ನಿನ್ನೆ ಬೆಳಗ್ಗೆಯಿಂದ ತುಂಬಿ ಹರಿದಿದ್ದ ಪರಿಣಾಮ ತಿರುಮಲಶೆಟ್ಟಿಹಳ್ಳಿ- ಚನ್ನಸಂದ್ರ, ಓಫಾರಂ, ITPL ಮತ್ತು ಬೆಂಗಳೂರು ನಗರದ ಸಂಪರ್ಕ ಕಷ್ಟವಾಗ್ತಿತ್ತು.

ಕೆಲವು ಜನ ವಾಹನಗಳಲ್ಲಿ ಸಂಚರಿಸುತ್ತಿದ್ದರೆ, ಕೆಲವರು ಆ ಕಡೆಗೆ ಹೋಗಲಾರದೆ, ಈ ಕಡೆ ಬರಲಾಗದೆ ಪರದಾಡಿದ್ದರು. ನಿನ್ನೆಗಿಂತ ಇಂದು ಮಳೆ ನೀರಿನ ಪ್ರಮಾಣ ಕಡಿಮೆ ಆಗಿದ್ದರಿಂದ ಇಂದು ತಿರುಮಲಶೆಟ್ಟಿ ಸೇತುವೆ ಬಳಿ ಗ್ರಾಮಪಂಚಾಯ್ತಿ ವತಿಯಿಂದ ಎರಡು ಟ್ರ್ಯಾಕ್ಟರ್‌ ಗಳ ಮೂಲಕ ಜನರನ್ನು ಚನ್ನಸಂದ್ರ ಕಡೆಗೆ, ಆ ಕಡೆಯಿಂದ ತಿರುಮಲಶೆಟ್ಟಿ ಕಡೆಗೆ ಸಾಗಿಸುತ್ತಿದ್ದಾರೆ.

ಅಂತೂ ಬೆಂಗಳೂರು ಪೂರ್ವದ ಅರ್ಧಭಾಗದಷ್ಟು ಪ್ರದೇಶ ದಕ್ಷಿಣ ಪಿನಾಕಿನಿ ನದಿ ಪಾತ್ರದ ತಗ್ಗುಪ್ರದೇಶ, ರಾಜಕಾಲುವೆ, ಸಂಪರ್ಕ ಸೇತುವೆಗಳು ಜಲಾವೃತವಾಗಿ ಜನ ಪರದಾಡುತ್ತಿರುವುದು ಮಾತ್ರ ವಿಪರ್ಯಾಸ.

-ಸುರೇಶ್ ಬಾಬು, ಪಬ್ಲಿಕ್ ನೆಕ್ಸ್ಟ್ ಹೊಸಕೋಟೆ

Edited By :
PublicNext

PublicNext

07/09/2022 04:10 pm

Cinque Terre

25.34 K

Cinque Terre

0

ಸಂಬಂಧಿತ ಸುದ್ದಿ