ಬೆಂಗಳೂರು: ಸ್ವಲ್ಪ ದಿನಗಳಿಂದ ಬಿಡುವು ಪಡೆದಿದ್ದ ವರುಣ ಮತ್ತೆ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಭಾರೀ ಮಳೆಯಿಂದಾಗಿ ಮತ್ತೆ ಕೆ.ಆರ್ ಪುರಂ ಮುಖ್ಯ ರಸ್ತೆಗಳು, ಲೇಟ್‌ಗಳು ಜಲಾವೃತವಾಗಿದೆ. ಸರ್ಜಾಪುರ ಮುಖ್ಯರಸ್ತೆ, ರೈನ್ ಬೋ ಡ್ರೈವ್ ಲೇಔಟ್, ಬೆಳ್ಳಂದೂರು ರಿಂಗ್ ರಸ್ತೆಯಂತೂ ಸಂಪೂರ್ಣವಾಗಿ ಜ್ವಲ ದಿಗ್ಬಂಧನದಿಂದ ಕೂಡಿದೆ. ರಸ್ತೆಯಲ್ಲಿ ಹೆಚ್ಚಾಗಿ ನೀರು ನಿತಿರುವುದರಿಂದ ದ್ವಿಚಕ್ರ ವಾಹನ, ಆಟೋ ರಿಕ್ಷಾಗಳು ಕೆಟ್ಟುನಿಂತಿದೆ.
ಸರ್ಜಾಪುರ ಮುಖ್ಯರಸ್ತೆಯಲ್ಲಿ ಮಳೆಯಿಂದ ಟ್ರಾಫಿಕ್ ಜಾಮ್ ಆಗಿದ್ದು, ರಸ್ತೆಯಲ್ಲಿ ಸಂಚಾರಿಸಲು ವಾಹನ ಸವಾರರ ಪರದಾಡುವಂತಾಗಿದೆ.
ಕೆ.ಆರ್.ಪುರ, ರಾಮಮೂರ್ತಿ ನಗರ, ವೈಟ್ ಫೀಲ್ಡ್, ಹೊಸಕೋಟೆ ಸುತ್ತಮುತ್ತ ಮತ್ತೆ ಮಳೆಯ ಅಬ್ಬರ ಮುಂದುವರೆಯಲಿದೆ. ಈಗ ಆಗಿರುವ ಮಳೆಯಿಂದ ತತ್ತರಿಸಿದ ಜನರಿಗೆ ವರುಣರಾಯ ಮತ್ತಷ್ಟು ಆತಂಕ ತಂದಿಡಲಿದ್ದಾನೆ.
PublicNext
05/09/2022 11:16 am