ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬೆಳ್ಳಂದೂರು-ಸರ್ಜಾಪುರ ರಸ್ತೆ, ವಿಪ್ರೊ ದೊಡ್ಡಕನ್ನಳ್ಳಿ ತಗ್ಗುಪ್ರದೇಶದ ರಸ್ತೆಗಳು ಜಲಾವೃತ

ಬೆಂಗಳೂರು: ಕಳೆದ ರಾತ್ರಿ ಮತ್ತು ಇಂದು ಮುಂಜಾನೆವರೆಗೂ ಸುರಿದ ಭಾರಿ ಮಳೆಗೆ ಬೆಳ್ಳಂಡೂರು ವ್ಯಾಪ್ತಿಯ ಸರ್ಜಾಪುರ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಬೆಳ್ಳಂಡೂರು ಪೊಲೀಸ್ ಠಾಣೆ ನಂತರದ ಕೈಕೊಂಡ್ರಹಳ್ಳಿ, ಜುನ್ನಸಂದ್ರ, ವಿಪ್ರೊ, ರೈನ್ಬೊ ಲೇಔಟ್, ದೊಡ್ಡಕನ್ನಳ್ಳಿ ಸುತ್ತಮುತ್ತಲ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.

ಕೈಕೊಂಡ್ರಹಳ್ಳಿ ಕೆರೆ ತುಂಬಿದ ಹಿನ್ನಲೆಯಲ್ಲಿ ಕೆರೆಕೋಡಿ ನೀರು ಸರ್ಜಾಪುರ ರಸ್ತೆಯನ್ನ ಆವರಿಸಿಕೊಂಡು ಹರಿಯುತ್ತಿದೆ. ಇದರ ಪರಿಣಾಮ ಸರ್ಜಾಪುರ ರಸ್ತೆಯಲ್ಲಿ ಸಂಚರಿಸಬೇಕಾದ ವಾಹನ ಸವಾರರು ಪರದಾಡುತ್ತಿದ್ದಾರೆ‌. ತಗ್ಗು ಪ್ರದೇಶಗಳಲ್ಲಿ ನಿಲ್ಲಿಸಿರುವ ವಾಹನಗಳಲ್ಲೆಲ್ಲ ನೀರು ಆವರಸಿಕೊಂಡಿರುವುದು, ಸ್ಥಳದ ದುಸ್ಥಿತಿಗೆ ಕಾರಣವಾಗಿದೆ. ಈ ಭಾಗದಲ್ಲಿ ವಿಪ್ರೊ, ಅಕ್ಸೆಂಚರ್, ಕೇಪ್ ಜೆಮಿನಿ, ಹನಿವೆಲ್ ಮೊದಲಾದ ಹೈಪ್ರೊಫೈಲ್ ಸಾಫ್ಟ್‌ವೇರ್ ದಿಗ್ಗಜ ಕಂಪನಿಗಳು ಇರುವುದು ಈ ಪ್ರದೇಶದಲ್ಲಿ. ಸದ್ಯ ರಸ್ತೆ ಜಲಾವೃತ ಆಗಿರುವುದರಿಂದ ಸಾರ್ವಜನಿಕ ಓಡಾಟಕ್ಕೆ ತೊಂದರೆಯಾಗಿದೆ.

Edited By :
PublicNext

PublicNext

05/09/2022 09:45 am

Cinque Terre

30.97 K

Cinque Terre

0

ಸಂಬಂಧಿತ ಸುದ್ದಿ