ಬೆಂಗಳೂರು: ನಿನ್ನೆ ಸಂಜೆಯಿಂದ ಮಳೆ ಆರಂಭವಾಗಿ ಮಧ್ಯ ರಾತ್ರಿಯವರೆಗೂ ಜೋರಾಗಿಯೇ ಮಳೆ ಸುರಿದಿದೆ. ಹಲವು ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆ ಸುರಿದಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ.
ದಕ್ಷಿಣ ಬೆಂಗಳೂರಿನ ವಿದ್ಯಾಪೀಠ ಪ್ರದೇಶದಲ್ಲಿ 89 MM ಮಳೆ ದಾಖಲಾಗಿದೆ.
ಸಾರಕ್ಕಿ 62 Mm, ಬೊಮ್ಮನಹಳ್ಳಿ 44 Mm, ಎಚ್‌ಎಸ್‌ಆರ್ ಲೇಔಟ್ 35 Mm, ಬೆಂಗಳೂರು ಪೂರ್ವ 26Mm, ಬಿಳೇಕಹಳ್ಳಿ 45 Mm, ಬಿಟಿಎಂ ಲೇಔಟ್ 46 Mm. ಈ ಪ್ರದೇಶದಲ್ಲಿ ಭಾರಿ ಮಳೆಯಾಗಿದೆ.
ಮುಂದಿನ 3 ದಿನಗಳವರೆಗೆ ಬೆಂಗಳೂರು ನಗರದಲ್ಲಿ ಭಾರಿ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಇಂದು ಸಹ ಸಂಜೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಮುನ್ಸೂಚನೆ ತಿಳಿಸಿದೆ.
ನವೀನ ಪಬ್ಲಿಕ್ ನೆಕ್ಸ್ಟ್
ಬೆಂಗಳೂರು.
PublicNext
15/04/2022 06:11 pm