ಬೆಂಗಳೂರು: ನಿನ್ನೆ ಸಂಜೆ ಬೆಂಗಳೂರು ದಕ್ಷಿಣ ಹಲವೆಡೆ ಭಾರೀ ಮಳೆಯಾಗಿದ್ದು, ಮನೆಗಳಿಗೆ ನೀರು ನುಗ್ಗಿದೆ. ಬಿಬಿಎಂಪಿ ಆಯುಕ್ತರು ಹಲವು ಪ್ರದೇಶಗಳಿಗೆ ಭೇಟಿ ನೀಡಿದ್ದು,ಜಲಾವೃತಗೊಂಡ ಪ್ರತಿ ಮನೆಗೆ ಪರಿಹಾರ ನೀಡಲಾಗುವುದು ಎಂದು ಹೇಳಿದ್ದಾರೆ.
ಈ ಬೇಸಿಗೆಯಲ್ಲಿ ಭಾರೀ ಮಳೆಯನ್ನು ಬಿಬಿಎಂಪಿ ನಿರೀಕ್ಷಿಸಿರಲಿಲ್ಲ. ಆದರೆ ನಾವು ಮಳೆಗಾಲಕ್ಕೆ ಸಿದ್ಧರಾಗಿದ್ದೇವೆ ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದ್ದಾರೆ.
ಮಳೆ ನೀರಿನ ಪ್ರವಾಹ ತಡೆಯಲು ರಾಜಕಾಲುವೆ ಬಳಿ ತಡೆಗೋಡೆ ನಿರ್ಮಿಸಲಾಗುವುದು ಅಂತಲೂ ಕಮಿಷನರ್ ಗೌರವ್ ಗುಪ್ತಾ ಹೇಳಿದರು.
ನವೀನ ಪಬ್ಲಿಕ್ ನೆಕ್ಸ್ಟ್
ಬೆಂಗಳೂರು
Kshetra Samachara
15/04/2022 05:40 pm