ದೊಡ್ಡಬಳ್ಳಾಪುರ : ಅರ್ಕಾವತಿ ನದಿ ಪಾತ್ರದ ಚಿಕ್ಕತುಮಕೂರು ಮತ್ತು ದೊಡ್ಡತುಮಕೂರು ಕೆರೆಗಳು ವಿಷಯುಕ್ತ ನೀರು ಬೀಡಲಾಗುತ್ತಿದೆ, ದೊಡ್ಡಬಳ್ಳಾಪುರ ನಗರಸಭೆಯ ಇಂಜಿನಿಯರ್ಸ್ ಗಳು ಭೇಟಿ ನೀಡಿ ನಮ್ಮಿಂದ ಯಾವುದೇ ಲೋಪವಾಗಿಲ್ಲವೆಂದು ಕೈತೊಳೆದುಕೊಂಡ ಅವರು ಕೆರೆ ನೀರು ವಿಷವಾಗಲು ಬಾಶೆಟ್ಟಿಹಳ್ಳಿ ಕೈಗಾರಿಕಾಗಳಿಂದ ತ್ಯಾಜ್ಯ ನೀರು ಕಾರಣವೆಂದು ಹೇಳಿದ್ದಾರೆ.
ಅರ್ಕಾವತಿ ನದಿ ಪಾತ್ರದಲ್ಲಿ ಬರುವ ಕೆರೆಗಳಾದ ಚಿಕ್ಕತುಮಕೂರು ಮತ್ತು ದೊಡ್ಡತುಮಕೂರು ಕೆರೆಗಳಿಗೆ ದೊಡ್ಡಬಳ್ಳಾಪುರ ನಗರಸಭೆಯ ಒಳಚರಂಡಿ ನೀರು ಮತ್ತು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ತ್ಯಾಜ್ಯ ನೀರು ಹರಿದು ಬರುತ್ತಿದೆ, ವೈಜ್ಞಾನಿಕವಾಗಿ ಶುದ್ದಿಕರಣವಾಗದೆ ತ್ಯಾಜ್ಯ ನೀರು ಕೆರೆಗೆ ಸೇರಿದ ಪರಿಣಾಮ ಕೆರೆಗಳಲ್ಲಿ ಹಾನಿಕಾರಕ ಪ್ಲೋರೆಡ್, ಮೆಗ್ನಿಶಿಯಂ ಮತ್ತು ಯೂರಿಯಾ ಪತ್ತೆಯಾಗಿದೆ, ಬಳಸಲು ಯೋಗ್ಯವಲ್ಲದ ನೀರು ನಮಗೆ ಬೇಡವೆಂದು ಹೋರಾಟಕ್ಕೆ ಮುಂದಾಗಿರುವ ದೊಡ್ಡತುಮಕೂರು ಗ್ರಾಮಸ್ದರು ದೊಡ್ಡಬಳ್ಳಾಪುರ ನಗರಸಭೆಗೆ ಪಾದಯಾತ್ರೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ದೊಡ್ಡತುಮಕೂರು ಗ್ರಾಮಸ್ಥರ ಹೋರಾಟಕ್ಕೆ ಹೆದರಿದ ದೊಡ್ಡಬಳ್ಳಾಪುರ ನಗರಸಭೆಯ ಇಂಜಿನಿಯರ್ಸ್ ಗಳ ತಂಡ ಚಿಕ್ಕತುಮಕೂರು ಕೆರೆಯ ಅಂಗಳದಲ್ಲಿರುವ ನಗರಸಭೆಯ ಎಸ್ ಟಿಪಿ ಘಟಕಕ್ಕೆ ಭೇಟಿ ನೀಡಿದರು, ದೊಡ್ಡಬಳ್ಳಾಪುರ ನಗರದ ಒಳಚರಂಡಿ ನೀರು ವೈಜ್ಞಾನಿಕ ಸಂಸ್ಕರಣೆಯಾಗದೆ ನೇರವಾಗಿ ಕೆರೆಗೆ ಸೇರಿದ ಪರಿಣಾಮ ಕೆರೆ ನೀರು ವಿಷವಾಗಿದೆ ಎಂಬ ಆರೋಪವನ್ನ ಇಂಜಿನಿಯರ್ಸ್ ಗಳು ಒಪ್ಪಿ ಕೊಳ್ಳಲೇ ಸಿದ್ದರಿಲ್ಲ,
ನಗರಸಭೆಯ ಎಸ್ ಟಿಪಿ ಘಟಕದಲ್ಲಿ ನದಿ ಮತ್ತು ಕೆರೆಗಳು ನೈಸರ್ಗಿಕವಾಗಿ ಶುದ್ದಿಕರಣವಾಗುವ ರೀತಿಯಲ್ಲಿ ತ್ಯಾಜ್ಯ ನೀರು ಸಂಸ್ಕರಣೆಯಾಗಿ ಕೆರೆಯನ್ನ ಸೇರುತ್ತೆ, ಕೆರೆ ನೀರು ವಿಷವಾಗಲು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಿಂದ ಬರುವ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡುವ ಎಸ್ ಟಿಪಿ ಘಟಕ ಇಲ್ಲದೆ ಇರುವುದೆ ಕಾರಣವಾಗಿದೆ ಎಂದರು, ಎಸ್ ಟಿಪಿ ಘಟಕದಲ್ಲಿನ ಹೊಂಡದಲ್ಲಿರುವ ನೀರನ್ನು ಪರೀಕ್ಷೆಗೆ ತೆಗೆದುಕೊಂಡಿದ್ದು ಲ್ಯಾಬ್ ನಿಂದ ಬರುವ ವರದಿಯನ್ನ ನೋಡಿ ಕ್ರಮ ತೆಗೆದುಕೊಳ್ಳುವುದ್ದಾಗಿ ಹೇಳಿದ್ದಾರೆ.
ದೊಡ್ಡಬಳ್ಳಾಪುರ ನಗರಸಭೆ ಇಂಜಿನಿಯರ್ಸ್ ಗಳ ಮಾತಿಗೆ ಒಪ್ಪದ ಗ್ರಾಮಸ್ಥರು ನಮ್ಮ ಕೆರೆಗಳಿಗೆ ವೈಜ್ಞಾನಿಕವಾಗಿ ಸಂಸ್ಕರಿಸಿ ನೀರನ್ನು ಬೀಡಬೇಕು ಇಲ್ಲದಿದ್ದಾರೆ ಉಗ್ರ ಹೋರಾಟದ ಎಚ್ಚರಿಕೆಯನ್ನ ನೀಡಿದರು.
Kshetra Samachara
14/01/2022 08:29 pm