ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವೀರಾಪುರ ಕೆರೆಯ ಒಡಲು ಸೇರಿದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ತ್ಯಾಜ್ಯ ನೀರು.

ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ನೀರು ಯಾವುದೇ ರೀತಿಯ ಶುದ್ಧೀಕರಣವಾಗದೆ ನೇರವಾಗಿ ವೀರಾಪುರ ಕೆರೆಯ ಒಡಲು ಸೇರುತ್ತಿದೆ. ಕೈಗಾರಿಕೆಗಳ ವಿಷಯುಕ್ತ ನೀರಿನಿಂದ ಕೆರೆಯ ದಡದಲ್ಲಿ ಮೀನುಗಳ ಮಾರಣಹೋಮವೇ ಸಂಭವಿಸಿದೆ. ಸ್ಥಳಕ್ಕೆ ಭೇಟಿ ನೀಡಿದ ಪರಿಸರಮಾಲಿನ್ಯ ನಿಯಂತ್ರಣ ಅಧಿಕಾರಿಗಳನ್ನ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.

ದೊಡ್ಡಬಳ್ಳಾಪುರ ನಗರಕ್ಕೆ ಅಂಟಿಕೊಂಡಂತೆ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದವಿದೆ, ಕೈಗಾರಿಕಾ ಪ್ರದೇಶದ ನಡುವೆ 13 ಎಕರೆ ವಿಸ್ತೀರ್ಣದಲ್ಲಿ ವೀರಾಪುರ ಕೆರೆ ಇದೆ. ಕಳೆದ ಎರಡು ವರ್ಷದಿಂದ ಉತ್ತಮ ಮಳೆಯಾಗುತ್ತಿರುವ ಹಿನ್ನಲೆ ಕೆರೆ ತುಂಬಿ ಹರಿಯುತ್ತಿದ್ದು ಬಸವರಾಜು ಎಂಬುವರು ಲಕ್ಷಾಂತರ ಖರ್ಚು ಮಾಡಿ ಸಾವಿರಾರು ಮೀನು ಮರಿಗಳನ್ನ ಬಿಟ್ಟು ಮೀನು ಸಾಕಾಣಿಕೆ ಸಹ ಮಾಡುತ್ತಿದ್ದರು. ಆದರೆ ಕೆಜಿ ತೂಕದ ಸಾವಿರಾರು ಮೀನುಗಳು ಸತ್ತು ಕೆರೆಯ ಅಂಚಿನಲ್ಲಿ ತೇಲುತ್ತಿವೆ.

ವೀರಾಪುರ ಕೆರೆಗೆ ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಮತ್ತು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೈಗಾರಿಕೆಗಳ ತ್ಯಾಜ್ಯ ನೀರು ಮತ್ತು ಬಡಾವಣೆಯ ನೀರು ಶುದ್ದೀಕರಣವಾಗದೆ ನೇರವಾಗಿ ಕೆರೆಗೆ ಸೇರಿದೆ. ಇದರಿಂದ ಕೆರೆಯ ನೀರಿನಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗಿ ಮೀನುಗಳು ಸಾವನ್ನಪ್ಪಿವೆ. ಕೆರೆಯ ನೀರಿನ ಸ್ಯಾಂಪಲ್ ತೆಗೆದುಕೊಂಡು ಪ್ರಯೋಗಾಲಯಕ್ಕೆ ಕಳಿಸಿ ಅಲ್ಲಿಂದ ಬರುವ ವರದಿ ಮೇಲೆ ಕೈಗಾರಿಕೆಗಳ ಮೇಲೆ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ.

ಪ್ರತಿ ವರ್ಷ ಮಳೆಗಾಲ ಬಂದಾಗಲು ಮೀನುಗಳ ಮರಣಹೋಮವೇ ನಡೆಯುತ್ತೆ, ಕೈಗಾರಿಕೆಗಳ ತ್ಯಾಜ್ಯ ನೀರನ್ನ ಟ್ರೀಟ್‌ಮೆಂಟ್ ಮಾಡದೆ ನೇರವಾಗಿ ಕೆರೆಗೆ ಬಿಡುತ್ತಿದ್ದಾರೆ. ಇವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಬದಲಿಗೆ ಅಧಿಕಾರಿಗಳು ಕಾರ್ಖಾನೆಗಳ ಮಾಲೀಕರ ಕೈಗೊಂಬೆಯಾಗಿದ್ದಾರೆಂದು ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು.

Edited By :
PublicNext

PublicNext

09/08/2022 04:16 pm

Cinque Terre

20.45 K

Cinque Terre

0

ಸಂಬಂಧಿತ ಸುದ್ದಿ